ಶಿವಮೊಗ್ಗ ಪಾಲಿಕೆಯಿಂದ ಮಹತ್ವದ ಪ್ರಕಟಣೆ, 15 ದಿನದ ಗಡುವು, ತಪ್ಪಿದಲ್ಲಿ ಕಾನೂನು ಕ್ರಮ ಗ್ಯಾರಂಟಿ

 ಶಿವಮೊಗ್ಗ  LIVE 

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆ, ಫುಟ್‌ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿ ವ್ಯಾಪಾರದ ಕೈಗಾಡಿಗಳು ನಿಷ್ಕ್ರಿಯ, ಅನುಪಯುಕ್ತ, ಕಬ್ಬಿನ ಹಾಲಿನ ಗಾಡಿ, ಐಸ್ ಕ್ರೀಂ ಗಾಡಿ ಇತ್ಯಾದಿ ಮಾರಾಟ ಪರಿಕರಗಳು, ತಾತ್ಕಾಲಿಕ ಶೆಡ್‌ ಗಳು ಇತ್ಯಾದಿಯನ್ನು ಅನಧಿಕೃತವಾಗಿ ಬಿಟ್ಟಿರುವುದು (Unused items) ಕಂಡು ಬಂದಿದೆ. ಅವುಗಳನ್ನು ತೆರವುಗೊಳಿಸಲು ಪಾಲಿಕೆ ತೀರ್ಮಾನಿಸಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shimoga-Mahanagara-Palike-ambedkar-statue

ಈ ಪ್ರಕಟಣೆ ಹೊರಡಿಸಿದ 15 ದಿನದೊಳಗೆ ಸಂಬಂಧಿಸಿದವರು ಕೂಡಲೇ ತಮ್ಮ ಅನುಪಯುಕ್ತ, ನಿಷ್ಕ್ರಿಯ ಅಥವಾ ವ್ಯಾಪಾರ ಮುಗಿದ ನಂತರ ಅಲ್ಲೇ ಬಿಟ್ಟಿರುವ ಗಾಡಿ, ಅನುಪಯುಕ್ತ ವಸ್ತು ಇತ್ಯಾದಿಗಳನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಪಾಲಿಕೆ ವತಿಯಿಂದ ಈ ಸಾಮಗ್ರಿಗಳನ್ನು ವಶಪಡಿಸಿಕೊಂಡು ಸ್ಕ್ರಾಪ್‌ ಮಾಡುವುದಲ್ಲದೇ ಸಂಬಂಧಿಸಿದವರ ಮೇಲೆ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ವೈಭವದ ತೆಪ್ಪೋತ್ಸವ, ಇಲ್ಲಿವೆ 12 ಫೋಟೊಗಳು, ಹೇಗಿತ್ತು ವ್ಯವಸ್ಥೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment