ಶಿವಮೊಗ್ಗದಲ್ಲಿ ವೈಭವದ ತೆಪ್ಪೋತ್ಸವ, ಇಲ್ಲಿವೆ 12 ಫೋಟೊಗಳು, ಹೇಗಿತ್ತು ವ್ಯವಸ್ಥೆ?

SHIMOGA: ಸೀತಾ ಕಲ್ಯಾಣ ಶತಮಾನೋತ್ಸವ ಅಂಗವಾಗಿ ಶಿವಮೊಗ್ಗ ತುಂಗಾ ನದಿಯಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ (Teppotsava) ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು.‌

ತೆಪ್ಪೋತ್ಸವಕ್ಕು ಮೊದಲು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ನಡೆಸಲಾಯಿತು. ಪಟಾಕಿಗಳನ್ನು ಸಿಡಿಸುತ್ತ, ರಸ್ತೆಯ ಉದ್ದಕ್ಕು ಕರ್ಪೂರ ಹಚ್ಚಲಾಯಿತು.

ವೈಭವದ ತೆಪ್ಪೋತ್ಸವ ಕಣ್ತುಂಬಿಕೊಂಡ ಜನ

ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ನದಿಯಲ್ಲಿ ವೈಭವದ ತೆಪ್ಪೋತ್ಸವ ನೆರವೇರಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ದೇವರ ಮೂರ್ತಿಗಳನ್ನು ತೆಪ್ಪದಲ್ಲಿ ಇರಿಸಿ, ತುಂಗಾ ನದಿಯಲ್ಲಿ ಉತ್ಸವ ನೆರವೇರಿಸಲಾಯಿತು.

ಇದನ್ನೂ ಓದಿ » ಬಾಪೂಜಿನಗರದಲ್ಲಿ ಬನಶಂಕರಿ ದೇವಿಯ ವೈಭವದ ರಥೋತ್ಸವ, ಏನೇನೆಲ್ಲ ಪೂಜೆ ಇತ್ತು?

ತೆಪ್ಪೋತ್ಸವ ಆರಂಭವಾಗುತ್ತಿದ್ದಂತೆ ಭಕ್ತರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ತೆಪ್ಪೋತ್ಸವದ ಸಂದರ್ಭ ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಇದನ್ನು ಕಣ್ತುಂಬಿಕೊಂಡು ಜನರು ಖುಷಿ ಪಟ್ಟರು. ಇನ್ನು, ಹೊಳೆಯಲ್ಲಿ ದೀಪಗಳನ್ನು ತೇಲಿ ಬಿಡಲಾಯಿತು. ಮತ್ತೊಂದೆಡೆ ತೆಪ್ಪೋತ್ಸವದ ಹಿನ್ನೆಲೆ ಈ ಬಾರಿ ಕಣ್ಮನ ಸೆಳೆಯುವಂತೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

grand Teppotsava of Lord Seetharamanjaneya in Shivamogga's Tunga River
ಶಿವಮೊಗ್ಗದಲ್ಲಿ ತೆಪ್ಪೋತ್ಸವಕ್ಕು ಮೊದಲು ಮೆರವಣಿಗೆ ನಡೆಸಲಾಯಿತು
grand Teppotsava of Lord Seetharamanjaneya in Shivamogga's Tunga River
ತೆಪ್ಪೋತ್ಸವದ ಹಿನ್ನೆಲೆ ಕೋಟೆ ರಸ್ತೆಯಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

grand Teppotsava of Lord Seetharamanjaneya in Shivamogga's Tunga River

grand Teppotsava of Lord Seetharamanjaneya in Shivamogga's Tunga River
ತೆಪ್ಪೋತ್ಸವ ವೀಕ್ಷಿಸಲು ಈ ಬಾರಿ ತುಂಗಾ ನದಿಯ ದಂಡೆ ಮತ್ತು ಚೆಕ್‌ ಡ್ಯಾಂ ಮೇಲೆ ರೇಲಿಂಗ್‌ ಹಾಕಲಾಗಿತ್ತು

grand Teppotsava of Lord Seetharamanjaneya in Shivamogga's Tunga River

grand Teppotsava of Lord Seetharamanjaneya in Shivamogga's Tunga River

grand Teppotsava of Lord Seetharamanjaneya in Shivamogga's Tunga River

grand Teppotsava of Lord Seetharamanjaneya in Shivamogga's Tunga River
ಕೊರ್ಪಲಯ್ಯ ಛತ್ರ ಮಂಟಪದ ಮೇಲೆ ಸ್ಯಾಕ್ಸೋಫೋನ್‌ ವಾದನ.

grand Teppotsava of Lord Seetharamanjaneya in Shivamogga's Tunga River

grand Teppotsava of Lord Seetharamanjaneya in Shivamogga's Tunga River
ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರ ಕುಟುಂಬ ತೆಪ್ಪೋತ್ಸವ ಕಣ್ತುಂಬಿಕೊಂಡಿತು

grand Teppotsava of Lord Seetharamanjaneya in Shivamogga's Tunga River

grand Teppotsava of Lord Seetharamanjaneya in Shivamogga's Tunga River

ಇದನ್ನೂ ಓದಿ » ಶಿವಮೊಗ್ಗದಲ್ಲಿ ಟ್ರಾಫಿಕ್‌ ಫೈನ್‌ ಎಷ್ಟಿದೆ ಅಂತಾ ನೋಡಲು ಹೋಗಿ ₹11.25 ಲಕ್ಷ ಕಳೆದುಕೊಂಡ ವ್ಯಕ್ತಿ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 3, 2026 at 10:28 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 3, 2026

Leave a Comment