ಶಿವಮೊಗ್ಗ LIVE
ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಇಲಾಖೆಯು ಜನವರಿ 1ರಿಂದ ಹಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುವ ಕೆಲವು ರೈಲುಗಳ ವೇಳಾಪಟ್ಟಿಯಲ್ಲಿಯು ಬದಲಾವಣೆಯಾಗಿದೆ. ಅವುಗಳ ವೇಳಾಪಟ್ಟಿ (train timings) ಇಲ್ಲಿದೆ.
ಶಿವಮೊಗ್ಗ – ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12090)
ವಾರದ ಎಲ್ಲ ದಿನವು ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಮಜೆಸ್ಟಿಕ್ ರೈಲ್ವೆ ನಿಲ್ದಾಣ ತಲುಪಲಿದೆ.
ಭದ್ರಾವತಿಗೆ 5.31ಕ್ಕೆ ತಲುಪಿ 5.33ಕ್ಕೆ ಹೊರಡಲಿದೆ. ತರೀಕೆರೆ (5.50/5.51), ಬೀರೂರು (6.17/6.18), ಕಡೂರು (6.27/6.28), ಅರಸೀಕೆರೆ (6.58/7.00), ತಿಪಟೂರು (7.14/7.15), ತುಮಕೂರು (8.09/8.10), ಯಶವಂತಪುರ (9.18/9.20), ಬೆಂಗಳೂರು 9.50ಕ್ಕೆ ತಲುಪಲಿದೆ.

ತಾಳಗುಪ್ಪ – ಬೆಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 20652)
ಪ್ರತಿದಿನ ಬೆಳಗ್ಗೆ 5.20ಕ್ಕೆ ತಾಳಗುಪ್ಪದಿಂದ ಹೊರಡಲಿದೆ. ಸಾಗರದಿಂದ ಬೆಳಗ್ಗೆ 5.37ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬೆಳಗ್ಗೆ 7.10ಕ್ಕೆ ಹೊರಡಲಿದೆ. ಭದ್ರಾವತಿ 7.30ಕ್ಕೆ, ಮಧ್ಯಾಹ್ನ 12ಕ್ಕೆ ಬೆಂಗಳೂರು ತಲುಪಲಿದೆ.
ಶಿವಮೊಗ್ಗ – ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16580)
ಶಿವಮೊಗ್ಗದಿಂದ ಪ್ರತಿದಿನ ಮಧ್ಯಾಹ್ನ 3.50ಕ್ಕೆ ಹೊರಡಲಿದೆ. ಭದ್ರಾವತಿಯಿಂದ 4.10ಕ್ಕೆ ಹೊರಡಲಿದೆ. ರಾತ್ರಿ 8.35ಕ್ಕೆ ಯಶವಂತಪುರ ತಲುಪಲಿದೆ.

ಶಿವಮೊಗ್ಗ – ಬೆಂಗಳೂರು – ಎಂಜಿಆರ್ ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12692)
ವಾರಕ್ಕೆ ಒಮ್ಮೆ ಮಾತ್ರ ರೈಲು ಸಂಚರಿಸಲಿದೆ. ಶನಿವಾರ ಸಂಜೆ 5.40ಕ್ಕೆ ಹೊರಡಲಿದೆ. ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಲಿದೆ. ಭಾನುವಾರ ಬೆಳಗ್ಗೆ 4.55ಕ್ಕೆ ಚೆನ್ನೈ ತಲುಪಲಿದೆ.
ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 16228)
ಪ್ರತಿದಿನ ತಾಳಗುಪ್ಪದಿಂದ ರಾತ್ರಿ 8.55ಕ್ಕೆ ಹೊರಡಲಿದೆ. ರಾತ್ರಿ 11 ಗಂಟೆಗೆ ಶಿವಮೊಗ್ಗದಿಂದ ಹೊರಡಲಿದೆ. ಬೆಳಗ್ಗೆ 4.50ಕ್ಕೆ ಬೆಂಗಳೂರು ತಲುಪಲಿದೆ. ಬೆಳಗ್ಗೆ 8.20ಕ್ಕೆ ಮೈಸೂರು ತಲುಪಲಿದೆ.
ಶಿವಮೊಗ್ಗ – ಯಶವಂತಪುರ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16582)
ಭಾನುವಾರ, ಮಂಗಳವಾರ, ಗುರುವಾರ ಮಾತ್ರ ಈ ರೈಲು ಸಂಚರಿಸಲಿದೆ. ಶಿವಮೊಗ್ಗದಿಂದ ರಾತ್ರಿ 11.55ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 4.45ಕ್ಕೆ ಯಶವಂತಪುರ ತಲುಪಲಿದೆ.
LATEST NEWS
- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

- ಶಾಲೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡ ಶಿಕ್ಷಕ

About The Editor
ನಿತಿನ್ ಆರ್.ಕೈದೊಟ್ಲು






