ಮೈಮೇಲೆ ಹರಿದ ಜಂಬಿಟ್ಟಿಗೆ ಲಾರಿ, ಸ್ಥಳದಲ್ಲೇ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

 ಶಿವಮೊಗ್ಗ  LIVE 

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆ ನೋಡ್ಲು ಬಸ್ ನಿಲ್ದಾಣದ ಬಳಿ ಜಂಬಿಟ್ಟಿಗೆ ತುಂಬಿದ್ದ ಲಾರಿ ಡಿಕ್ಕಿ (Road Accident) ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಂಬಳ್ಳಿಯ ಎಣ್ಣೆನೋಡ್ಲು ನಿವಾಸಿ ನಯಾಜ್ ಅಹಮದ್ (38) ಮೃತರು. ತೀರ್ಥಹಳ್ಳಿ ಕಡೆಗೆ ಹೊರಟಿದ್ದ ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತಿತ್ತು. ನಾಟಿ ಔಷಧದ ಪಾರ್ಸಲ್ ಕಳಿಸುವ ಉದ್ದೇಶದಿಂದ ನಯಾಜ್ ಚಾಲಕನ ಜೊತೆ ಮಾತನಾಡುತ್ತಾ ನಿಂತಿದ್ದರು. ರಿಪ್ಪನ್‌ಪೇಟೆ ಕಡೆಯಿಂದ ವೇಗವಾಗಿ ಬಂದ ಲಾರಿ ನಯಾಜ್‌ ಅಹಮದ್‌ಗೆ ಡಿಕ್ಕಿ ಹೊಡೆದು ಮೈಮೇಲೆ ಹರಿದಿದೆ. ಹೀಗಾಗಿ ದೇಹ ಇಬ್ಬಾಗವಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹೊಸನಗರ ಸಿಪಿಐ ಎಂ.ಐ. ಗೌಡಪ್ಪ ಗೌಡ ಭೇಟಿ ನೀಡಿ ಪರಿಶೀಲಿಸಿದರು. ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜು ರೆಡ್ಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

100126 man breathed last near ripponpete in hosanagara

ಇದನ್ನೂ ಓದಿ » ಬೆಜ್ಜವಳ್ಳಿ ಸಂಕ್ರಾಂತಿ ಉತ್ಸವಕ್ಕೆ ಮೂವರು ನಟರು, ಇಬ್ಬರು ಸಚಿವರು, ಏನೆಲ್ಲ ಕಾರ್ಯಕ್ರಮ ಇರಲಿದೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment