ಸಾಗರ ಪಟ್ಟಣದ ಜನರಿಗೆ 24 ಗಂಟೆ ಕುಡಿಯುವ ನೀರು ಪೂರೈಕೆ, ಎಂಎಲ್‌ಎ ಹೇಳಿದ್ದೇನು?

 ಶಿವಮೊಗ್ಗ  LIVE 

ಸಾಗರ: ಪಟ್ಟಣ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಗೆ (Water Supply) ₹230 ಕೋಟಿ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಜೋಗ ರಸ್ತೆಯಲ್ಲಿ ನಗರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ‘ಮನೆಯ ಅಂಗಳದಲ್ಲಿ ನಮ್ಮ ಶಾಸಕರು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತ ನಾಡಿದರು.

ಎಂಎಲ್‌ಎ ಏನೇನು ಹೇಳಿದರು?

24 ಗಂಟೆ ನೀರು ಕೊಡುವುದರಿಂದ ಯಾರಿಗೂ ನೀರಿನ ಕೊರತೆ ಅಗುವುದಿಲ್ಲ. ಹೊಸನಗರ ತಾಲೂಕಿಗೆ ಜೆಜೆಎಂ ಅಡಿ ನೀರು ಪೂರೈಕೆಗೆ ₹420 ಕೋಟಿ, ಸಾಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದ ಗುಬ್ಬಗೋಡಿನಿಂದ ಸಾಗರ ಗ್ರಾಮಾಂತರ ಪ್ರದೇಶಕ್ಕೆ ನೀರು ಪೂರೈಕೆಗೆ ಸುಮಾರು ₹340 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ.

Drinking-Water-for-sagara-city-MLA-Beluru-Gopalakrishna

ಜನರಿಗೆ ಶುದ್ಧ ನೀರು ಕೊಡುವುದು ಸರಕಾರದ ಅದ್ಯ ಕರ್ತವ್ಯವಾಗಿದೆ. ಜೋಗ ರಸ್ತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದ್ದಾರೆ. ಎರಡು ದಿನದಲ್ಲಿ ನಗರಸಭೆಯಿಂದ ಅಥವಾ ಶಾಸಕರ ಅನುದಾನದಿಂದ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

ಇದನ್ನೂ ಓದಿ » ಐದು ವರ್ಷದ ಚಿರತೆಯ ಮೃತದೇಹ ಪತ್ತೆ, ಎಲ್ಲಿ? ಆಗಿದ್ದೇನು?

ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣ ನವೀಕರಣಕ್ಕೆ ಎರಡು ಕೋಟಿ ಬಿಡುಗಡೆ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗೂಡಂಗಡಿ ನಿಷೇಧಿಸಿದೆ. ಹೊಸದಾಗಿ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗುತ್ತಿದೆ. ಜಾತ್ರೆ ಪ್ರಯುಕ್ತ 60 ರಸ್ತೆ ಡಾಂಬರೀಕರಣವಾಗುತ್ತಿವೆ.

ಮುಖಂಡರಾದ ಕಲಸೆ ಚಂದ್ರಪ್ಪ, ಐ.ಎನ್.ಸುರೇಶಬಾಬು, ಕೆ.ಹೊಳೆಯಪ್ಪ, ಉಷಾ, ಗಣಪತಿ ಮಂಡಗಳಲೆ, ಗ್ರೇಸಿ ಡಯಾಸ್ ಇನ್ನಿತರರು ಹಾಜರಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment