ಮೇಯಲು ಹೋದ ಹಸು ಮನೆಗೆ ಬರಲಿಲ್ಲ, ಸಮೀಪದ ಜಮೀಗೆ ಹೋದಾಗ ಕಾದಿತ್ತು ಆಘಾತ, ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಮೇಯಲು ಹೋಗಿದ್ದ ಹಸುವನ್ನು ಹತ್ಯೆ (Cow slaughtered) ಮಾಡಿರುವ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲಿ ನಡೆದಿದೆ. ಸಯ್ಯದ್‌ ಕರೀಂ ಎಂಬುವವರಿಗೆ ಸೇರಿದ ಹಸುವನ್ನು ಮಾಂಸಕ್ಕಾಗಿ ಹತ್ಯೆ ಮಾಡಿಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾಣೆಯಾದ ಹಸು, ಹಗ್ಗದಿಂದ ಗುರುತು

ಸಯ್ಯದ್‌ ಕರೀಂ ಎಂಬುವವರ ಹಸು ಸಾಕಿದ್ದರು. ಈಚೆಗೆ ಅದನ್ನು ಮೇಯಲು ಬಿಟ್ಟಿದ್ದ ಮನೆಗೆ ಮರಳಿರಲಿಲ್ಲ. ಹುಡುಕಾಟ ನಡೆಸಿದಾಗ ಜಮೀನೊಂದರ ಬಳಿ ಹಸುವಿನ ರಕ್ತ, ಹೊಟ್ಟೆಯ ಭಾಗದ ತ್ಯಾಜ್ಯ ಮತ್ತು ಹಸುವನ್ನು ಕಟ್ಟಲು ಬಳಸುತ್ತಿದ್ದ ಕೆಂಪು ಬಣ್ಣದ ಹಗ್ಗ ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

ಹಸುವಿನ ಅಂದಾಜು ಮೌಲ್ಯ ₹20,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

301123-Shimoga-Rural-Police-Station.webp

ಇದನ್ನೂ ಓದಿ » ಮಾವ, ಸೊಸೆಗೆ ಖಾರದ ಪುಡಿ ಎರಚಿ, ರಾಡ್‌ನಿಂದ ಹೊಡೆದ ಕೇಸ್‌, ಇಬ್ಬರು ಅರೆಸ್ಟ್‌, ಯಾರವರು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment