ಶಿವಮೊಗ್ಗ: ನಗರದಲ್ಲಿ ಬಟ್ಟೆ ಅಂಗಡಿ (shop) ಮತ್ತು ಜ್ಯೂಸ್ ಸೆಂಟರ್ನಲ್ಲಿ ಬೆಂಕಿ ಹೊತ್ತುಕೊಂಡಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಶಿವಮೊಗ್ಗದ ಕರ್ನಾಟಕ ಸಂಘ ಸಮೀಪ ತಗಡು ಶೀಟ್ಗಳನ್ನು ಬಳಸಿ ನಿರ್ಮಿಸಿದ್ದ ಮಳಿಗೆಯಲ್ಲಿ ಇಂದು ಸಂಜೆ ಬೆಂಕಿ ಹೊತ್ತುಕೊಂಡಿದೆ. ಅಂಗಡಿಯಲ್ಲಿದ್ದ ಬಟ್ಟೆ ಸಂಪೂರ್ಣ ಸುಟ್ಟು ಹೋಗಿದೆ. ಜ್ಯೂಸ್ ಸೆಂಟರ್ನಲ್ಲಿದ್ದ ರೆಫ್ರಿಜರೇಟರ್, ಮಿಕ್ಸಿ ಸೇರಿದಂತೆ ಹಲುವು ವಸ್ತುಗಳು ಆಹುತಿಯಾಗಿವೆ.
ಇನ್ನು, ಅಂಗಡಿಯಲ್ಲಿ ಸಣ್ಣ ಅಡುಗೆ ಸಿಲಿಂಡರ್ ಇತ್ತು. ಅದರಲ್ಲಿ ಗ್ಯಾಸ್ ಖಾಲಿಯಾಗಿತ್ತು ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಅದೃಷ್ಟವಶಾತ್ ಅಪಾಯ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗದ ಅಗ್ನಿಶಾಮಕ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

“ನಾನು ಮತ್ತು ಸಹೋದರ ಸೇರಿ ಕಳೆದ ಒಂದು ವರ್ಷದಿಂದ ಈ ಅಂಗಡಿ ನಡೆಸುತ್ತಿದ್ದೇವೆ. ಹಿಂಭಾಗದಲ್ಲಿ ಕಸ ಸುರಿದು ಅದಕ್ಕೆ ಬೆಂಕಿ ಹಚ್ಚುತ್ತಾರೆ. ಇದೆ ಬೆಂಕಿ ನಮ್ಮ ಅಂಗಡಿಗೆ ಆವರಿಸಿದೆ. ಹಿಂದೆಯು ಹಲವು ಬಾರಿ ಇಲ್ಲಿ ಕಸ ಸುರಿಯಬೇಡಿ, ಬೆಂಕಿ ಹಚ್ಚಬೇಡಿ ಎಂದು ತಿಳಿಸಿದ್ದೆವು. ಆದರೂ ಇವತ್ತು ಬೆಂಕಿ ಹಚ್ಚಿದ್ದಾರೆ.”

ಇದನ್ನೂ ಓದಿ » ಭದ್ರಾ ಎಡದಂಡೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ







