₹53 ಲಕ್ಷ ಹೂಡಿಕೆ ಆಗುವವರೆಗೆ ಚನ್ನಾಗಿದ್ದ ಆ್ಯಪ್ ಆಮೇಲೆ ನಾಪತ್ತೆ

ಶಿವಮೊಗ್ಗ: ಅತಿ ಹೆಚ್ಚು ಲಾಭದ ಆಮಿಷವೊಡ್ಡಿ ಟ್ರೇಡಿಂಗ್‌ ಹೆಸರಿನಲ್ಲಿ ವಂಚಿಸುವ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದೆ. ಲಾಭದ ಆಸೆಗೆ ಹಲವು ಮಂದಿ ಲಕ್ಷಾಂತರ ರುಪಾಯ ಹೂಡಿಕೆ ಮಾಡಿ ಆನ್‌ಲೈನ್‌ ವಂಚಕರ ಬಲೆಗೆ ಬೀಳುತ್ತಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

₹53 ಲಕ್ಷ ಹೂಡಿಕೆ 

ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಆನ್‌ಲೈನ್ ಟ್ರೇಡಿಂಗ್ ಮೂಲಕ ₹53.10 ಲಕ್ಷ ವಂಚಿಸಲಾಗಿದೆ. ಅಪರಿಚಿತರು ವಾಟ್ಸಾಪ್ ಮೂಲಕ ಉದ್ಯಮಿಯನ್ನು ಸಂಪರ್ಕಿಸಿದ್ದರು. ಪ್ರತಿಷ್ಠಿತ ಕಂಪನಿಯೊಂದರ ಟ್ರೇಡಿಂಗ್ ಆಪ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ನೀಡುವುದಾಗಿ ನಂಬಿಸಿದ್ದರು. ಇದನ್ನು ನಿಜವೆಂದು ಭಾವಿಸಿದ ಉದ್ಯಮಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ.

Shivamogga-CEN-Police-Station

Shivamogga-CEN-Police-Station

ಉದ್ಯಮಿಯು ತಾನು ಹೂಡಿಕೆ ಮಾಡಿದ ಹಣ ಹಿಂಪಡೆಯಲು ಯತ್ನಿಸಿದ್ದಾರೆ. ಆಗ ಆರೋಪಿಗಳು ಎರಡ್ಮೂರು ದಿನಗಳಲ್ಲಿ ಹಣ ಖಾತೆಗೆ ಬರುತ್ತದೆ ಎಂದು ಸಬೂಬು ಹೇಳಿದ್ದರು. ಹಣ ಖಾತೆಗೆ ವರ್ಗಾವಣೆ ಆಗದೆ ಇದ್ದಾಗ ಟ್ರೇಡಿಂಗ್‌ ಆಪ್ ಓಪನ್ ಮಾಡಿದ್ದಾರೆ. ಆದರೆ ಆ ಆಪ್‌ ಓಪನ್‌ ಆಗಲಿಲ್ಲ. ವಾಟ್ಸಾಪ್ ಮೆಸೇಜ್‌ ಬಂದಿದ್ದ ನಂಬರ್‌ಗೆ ರಿಪ್ಲೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಾರಲಿಲ್ಲ. ಆಗ ಉದ್ಯಮಿಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

Shivamogga Live Promotion

ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಡ್ರೋಣ್‌ ದಾಳಿ: ಭದ್ರಾವತಿಯಲ್ಲಿ 19 ಮಂದಿ ವಿರುದ್ಧ ಕೇಸ್‌, ಏನಿದು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment