ನಗದು ತುಂಬಿದ್ದ ಪರ್ಸ್‌ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

Published On : ಜನವರಿ 28, 2026

Published By : ನಿತಿನ್‌ ಆರ್‌.ಕೈದೊಟ್ಲು 

ಆಯನೂರು: ‌ದೇವಸ್ಥಾನದ ಬಳಿ ಸಿಕ್ಕ ಪರ್ಸ್ (purse) ಅನ್ನು ಆಯನೂರು ನಿವಾಸಿಗಳು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇದನ್ನೂ ಓದಿ – ಶಿವಮೊಗದಲ್ಲಿ ವಿದ್ಯಾರ್ಥಿಗಳೇ ಟ್ರಾಫಿಕ್‌ ಪೊಲೀಸರಾದರು, ಸಂಚಾರ ನಿಯಂತ್ರಿಸಿದರು, ಕಾರಣವೇನು?

ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಅವರಿಗೆ ಜನವರಿ 17ರಂದು ಆಯನೂರು ಸರ್ಕಲ್‌ನ ಗಣಪತಿ ದೇವಸ್ಥಾನದ ಮುಂಭಾಗ ಪರ್ಸ್‌ ಸಿಕ್ಕಿತ್ತು. ಅದರಲ್ಲಿ ₹10,000 ನಗದು ಮತ್ತು ಪ್ರಮುಖ ದಾಖಲೆಗಳಿದ್ದವು. ತಕ್ಷಣವೇ ಅದನ್ನು ಕುಂಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಒಪ್ಪಿಸಿದ್ದರು.

honest-residents-of-Ayanur-return-a-lost-purse

ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು ಅದು ಚಿಕ್ಕಮತಲಿ ಗ್ರಾಮದ ಬಲರಾಮ್ ಎಂಬುವವರಿಗೆ ಸೇರಿದ್ದೆಂದು ಗುರುತಿಸಿದ್ದರು. ಅವರನ್ನು ಠಾಣೆಗೆ ಕರೆಸಿ ಪರ್ಸ್ ಹಸ್ತಾಂತರಿಸಿದ್ದಾರೆ. ಕಳೆದುಹೋದ ಹಣ ಮತ್ತು ದಾಖಲೆಯನ್ನು ಪ್ರಾಮಾಣಿಕವಾಗಿ ಮರಳಿಸಿದ ಈ ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಕಾರ್ಯಕ್ಕೆ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ.

Total-Readers-of-Shivamogga-Live
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 28, 2026

Leave a Comment