ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ಸ್ವಂತ ಬಂಡವಾಳದ ಮೂಲಕ ಡಿಸಿಸಿ ಬ್ಯಾಂಕ್ (bank new branch) ಸದೃಢವಾದ ಆರ್ಥಿಕ ವಹಿವಾಟು ನಡೆಸುತ್ತಿದೆ. ಜಿಲ್ಲೆ ವ್ಯಾಪ್ತಿಯ ಸುಮಾರು ಒಂದೂವರೆ ಲಕ್ಷ ರೈತರಿಗೆ ಸಾಲ ವಿತರಣೆ ಮಾಡುತ್ತಿದ್ದು, ಲಾಭವನ್ನು ಹೆಚ್ಚಿಸಿಕೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಎಂಪಿಎಂಸಿ ಆವರಣದಲ್ಲಿ ಫೆ.5ರಂದು ಡಿಸಿಸಿ ಬ್ಯಾಂಕ್ ಹೊಸ ಶಾಖೆ ಆರಂಭವಾಗಲಿದೆ. ಬ್ಯಾಂಕ್‌ಗೆ 75 ವರ್ಷ ತುಂಬುತ್ತಿರುವ ಹೊತ್ತಲ್ಲಿ 50 ಶಾಖೆ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ. ಮೇಗರವಳ್ಳಿ, ಆರಗ, ದೇವಂಗಿ, ಕಟ್ಟೆಹಕ್ಕಲಿನಲ್ಲಿ ಶೀಘ್ರ ಹೊಸ ಶಾಖೆ ಆರಂಭಕ್ಕೆ ನಿರ್ಧರಿಸಲಾಗಿದೆ. ಪ್ರತಿ ಹೋಬಳಿಯಲ್ಲೂ ಡಿಸಿಸಿ ಬ್ಯಾಂಕ್ ಶಾಖೆ ಕಾರ್ಯನಿರ್ವಹಿಸಲಿವೆ ಎಂದರು.

ಆಧುನಿಕ ಬ್ಯಾಕಿಂಗ್ ವ್ಯವಸ್ಥೆಯಡಿ ಡಿಸಿಸಿ ಬ್ಯಾಂಕ್‌ಗೆ ಕಾಯಕಲ್ಪ ನೀಡಲಾಗಿದೆ. ಮೊಬೈಲ್ ಬ್ಯಾಂಕಿಂಗ್ ವಾಹನ ಗ್ರಾಮಕ್ಕೆ ತೆರಳಿ ಸೇವೆ ನೀಡಲಿದೆ. ಎಟಿಎಂ, ಮಿನಿ ಎಂಟಿಎಂ ವ್ಯವಸ್ಥೆ ಜಾರಿ ಮಾಡಲಾಗಿದೆ. ವ್ಯಾಪಾರಿ ಉದ್ದೇಶದ ಹೊಸ ಉದ್ಯಮಕ್ಕೆ ₹5 ಕೋಟಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಸಾಗರದ ಮಾರಿಕಾಂಬ ದೇವಿ ಜಾತ್ರೆ ಆರಂಭ, ತವರು ಮನೆಯಲ್ಲಿ ದೇವಿಯ ದರ್ಶನ, ಹೇಗಿತ್ತು ವೈಭವ?
ತಾಲೂಕು ವ್ಯಾಪ್ತಿಯಲ್ಲಿ ಡಿಸಿಸಿ ಬ್ಯಾಂಕ್ ಸುಮಾರು ₹500 ಕೋಟಿ ಸಾಲ ವಿತರಿಸಿದೆ. ಶೂನ್ಯ ಬಡ್ಡಿ, ರಿಯಾಯಿತಿ ಬಡ್ಡಿ ಸಾಲ ಯೋಜನೆ ಜಾರಿಯಲ್ಲಿರುವ ಕಾರಣ ಡಿಸಿಸಿ ಬ್ಯಾಂಕ್‌ಗೆ ಹೆಚ್ಚು ಲಾಭ ದೊರೆಯುತ್ತಿಲ್ಲ. ಇತರೆ ಸಂಘ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ನೀಡುವ ಉದ್ಯಮ, ಇತರೆ ಸಾಲದಿಂದ ಬ್ಯಾಂಕ್‌ಗೆ ಆದಾಯ ದೊರೆಯುತ್ತಿದೆ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಇದ್ದರು.

LATEST NEWS
- ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

About The Editor
ನಿತಿನ್ ಆರ್.ಕೈದೊಟ್ಲು















