ಒಂದೇ ಒಂದು ವಾಟ್ಸಪ್‌ ಮೆಸೇಜ್‌ನಿಂದಾಗಿ ₹3,65,892 ಹಣ ನಾಪತ್ತೆ, ಆಗಿದ್ದೇನು?

ಶಿವಮೊಗ್ಗ: ಟ್ರಾಫಿಕ್ ಚಲನ್ (Traffic Challan) ಪಾವತಿಸುವ ನೆಪದಲ್ಲಿ ಮೊಬೈಲ್‌ಗೆ ಎಪಿಕೆ (APK) ಫೈಲ್ ಕಳುಹಿಸಿ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 51 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ನಿವೃತ್ತ ಉದ್ಯೋಗಿಯ ವಾಟ್ಸಾಪ್ ನಂಬರ್‌ಗೆ ಅಪರಿಚಿತ ನಂಬರ್‌ನಿಂದ Traffic Challan ಹೆಸರಿನ ಪಿಡಿಎಫ್ ಮಾದರಿಯ ಎಪಿಕೆ ಫೈಲ್ ಬಂದಿತ್ತು. ಚಲನ್ ಮಾಹಿತಿಗಾಗಿ ದೂರುದಾರರು ಆ ಫೈಲ್ ಕ್ಲಿಕ್ ಮಾಡಿದಾಗ ಒಂದು ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿತ್ತು.

whatsapp-general-image

SMS-Fraud-Shimoga-CEN-Police-Station.

ಇದಾದ ನಂತರ ವಿವಿಧ ಅಪರಿಚಿತ ನಂಬರ್‌ಗಳಿಂದ ಇವರಿಗೆ ವಾಟ್ಸಾಪ್ ಕರೆಗಳು ಬಂದಿದ್ದವು. ಜನವರಿ 31ರಂದು ನಿವೃತ್ತ ಉದ್ಯೋಗಿಯ ಗಮನಕ್ಕೆ ಬಾರದೆ ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾತೆಯಿಂದ ಎರಡು ಹಂತದಲ್ಲಿ ಒಟ್ಟು ₹3,65,892 ಹಣ ವರ್ಗಾವಣೆಯಾಗಿದೆ. ಆರೋಪಿಗಳು ಕಳುಹಿಸಿದ್ದ ಅಪ್ಲಿಕೇಶನ್ ಮೂಲಕ ದೂರುದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು, ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಮೋಸದಿಂದ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಕರೆಂಟ್‌ ಇದ್ದರು ಅಡಿಕೆ ತೋಟದ ಮೋಟರ್‌ ಆನ್‌ ಆಗಲಿಲ್ಲ, ಪರಿಶೀಲಿಸಿದ ರೈತನಿಗೆ ಕಾದಿತ್ತು ಆಘಾತ

ಸಿ.ಇ.ಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

JNNCE-COLLEGE-ADVT.

Leave a Comment