ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ರೈತರೊಬ್ಬರು ಬೆಳೆದಿದ್ದ ಬೆಳೆಗಳಿಗೆ (Crops) ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ರಾತ್ರಿ ಯಾರೋ ಕಿಡಿಗೇಡಿಗಳು ಈ ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸುಮಾರು ₹50,000 ಮೌಲ್ಯದ ಬೆಳೆಗಳು ಸಂಪೂರ್ಣ ಭಸ್ಮವಾಗಿವೆ. ಈ ಹಿಂದೆ ಇದೇ ಜಮೀನಿನಲ್ಲಿ ರೈತರು ಬೆಳೆಸಿದ್ದ ತೆಂಗಿನ ಗಿಡಗಳನ್ನು ಸಹ ಕಿಡಿಗೇಡಿಗಳು ಕಿತ್ತು ಹಾಕಿ ತೊಂದರೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

Sogane-Board-in-Shivamogga-Taluk

ಸಂತೆಕಡೂರು ನಿವಾಸಿ ಹಾಲೇಶ್ ನಾಯ್ಕ್ ಎಂಬುವರು ಸೋಗಾನೆ ಗ್ರಾಮದಲ್ಲಿ ಎರಡು ಎಕರೆ ಬಗರ್ ಹುಕುಂ ಜಮೀನಿನಲ್ಲಿ ತಮ್ಮ ಪತ್ನಿ ಲೋಕಿ ಬಾಯಿ ಅವರೊಂದಿಗೆ ದಶಕಗಳಿಂದ ಕೃಷಿ ಮಾಡಿಕೊಂಡಿದ್ದಾರೆ. ಅವರು ಹುರುಳಿ ಮತ್ತು ತೊಗರಿ ಬೆಳೆಗಳನ್ನು ಬೆಳೆದಿದ್ದು, ಕಟಾವು ಮಾಡಿ, ಜಮೀನಿನಲ್ಲಿರುವ ಶೆಡ್ ಪಕ್ಕದಲ್ಲಿ ಬಣವೆ ಹಾಕಿದ್ದರು.

Sogane-Board-in-Shivamogga-Taluk

ಇದನ್ನೂ ಓದಿ – ಕಾರು, ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ನೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ, ಆಗಿದ್ದೇನು?

JNNCE-COLLEGE-ADVT.

Leave a Comment