ಶಿವಮೊಗ್ಗ ಬೈಪಾಸ್‌ನಲ್ಲಿ ಧಗಧಗ ಉರಿದ ಮಳಿಗೆ, ವಸ್ತುಗಳು ಸ್ಪೋಟ, ಏನೇನಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

ಶಿವಮೊಗ್ಗ: ಬಿಡಿ ಭಾಗಗಳ (spare parts) ಮಾರಾಟ ಮಳಿಗೆ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ದಟ್ಟ ಹೊಗೆ ಆವರಿಸಿಕೊಂಡು ಆತಂಕ ಮೂಡಿಸಿತ್ತು. ಇತ್ತ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಶಿವಮೊಗ್ಗದ ಬೈಪಾಸ್‌ ರಸ್ತೆಯಲ್ಲಿ ಮಳಿಗೆಯಲ್ಲಿ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲವೇ ಕ್ಷಣದಲ್ಲಿ ಮಳಿಗೆ ಒಳಗೆ ಭಾರಿ ಸ್ಪೋಟ ಸಂಭವಿಸಿದೆ.

ಧಗಧಗ ಉರಿದ ವಸ್ತುಗಳು

ಹಳೆ ವಾಹನಗಳ ಬಿಡಿ ಭಾಗಗಳ ಮಾರಾಟ ಮಳಿಗೆಯಲ್ಲಿ ಬೆಂಕಿ ಹೊತ್ತಿದ್ದು ಒಳಗಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಬ್ಯಾಟರಿ ಸೇರಿದಂತೆ ವಿವಿಧ ಬಿಡಿ ಭಾಗಗಳು ಸ್ಪೋಟಿಸಿರುವ ಶಂಕೆ ಇದೆ. ಇದರಿಂದ ಅಕ್ಕಪಕ್ಕ ಮಳಿಗೆಗಳ ಮಾಲೀಕರು, ಮನೆಯ ನಿವಾಸಿಗಳು ಭೀತಿಗೆ ಒಳಗಾಗಿದ್ದರು.

f2

ಅಗ್ನಿಶಾಮಕ ಸಿಬ್ಬಂದಿ ಹರಸಾಹಸ

ಬೆಂಕಿಯ ಭೀಕರತೆ ಕೆಲವೇ ಕ್ಷಣದಲ್ಲಿ ಅಕ್ಕಪಕ್ಕಕ್ಕು ವ್ಯಾಪಿಸಿತು. ಬಿಡಿಭಾಗಗಳ ಮಳಿಗೆ ಹಿಂಭಾಗದಲ್ಲಿ ನಿಲ್ಲಿಸಿದ್ದ ಗುಜರಿ ವಾಹನಗಳಿಗು ಬೆಂಕಿ ತಗುಲಿತು. ಹಿಂಬದಿಯ ಮನೆಗು ವ್ಯಾಪಿಸುವ ಆತಂಕವಿತ್ತು. ಇತ್ತ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ನಾಲ್ಕು ಅಗ್ನಿಶಾಮಕ ವಾಹನಗಳಲ್ಲಿ ನೀರು ಹಾಯಿಸಿದರು. ಅಗ್ನಿಶಾಮಕ ವಾಹನಗಳು ಬರುವುದು ವಿಳಂಬವಾಯಿ ಎಂದು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದರು.

f1

ಕರೆಂಟ್‌ ಕಟ್‌, ವಸ್ತುಗಳು ಹೊರಕ್ಕೆ

ಇನ್ನು, ಬೆಂಕಿ ಹೊತ್ತಿದ ವಿಷಯ ತಿಳಿಯುತ್ತಿದ್ದಂತೆ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಮಳಿಗೆ ಸೇರಿದಂತೆ ಅಕ್ಕಪಕ್ಕದ ಮಳಿಗೆಗಳಿಗೆ ವಿದ್ಯುತ್‌ ಕಂಬದಿಂದ ನೀಡಿದ ಸಂಪರ್ಕ ಕಡಿತಗೊಳಿಸಿದರು. ಅಕ್ಕಪಕ್ಕದ ಮಳಿಗೆಗಳು ತಗಡಿನಲ್ಲಿ ನಿರ್ಮಿಸಿದ್ದು, ಬೆಂಕಿ ವ್ಯಾಪಿಸುವ ಸಾಧ್ಯತೆ ಇತ್ತು. ಹಾಗಾಗಿ ಆ ಮಳಿಗೆಗಳ ಮಾಲೀಕರು ತಕ್ಷಣ ವಸ್ತುಗಳು ಬೇರೆಡೆ ಸಾಗಿಸಿದರು. ಅಲ್ಲದೆ ಅಂಗಡಿ ಒಳಭಾಗಿದಂದಲೇ ಬೆಂಕಿ ಹೊತ್ತದಂತೆ ನೀರು ಹಾಯಿಸಿದರು.

f3

ಖಾಸಗಿ ವಾಟರ್‌ ಟ್ಯಾಂಕರ್‌

ಅಗ್ನಿಶಾಮಕ ವಾಹನಗಳು ಬರುವುದು ವಿಳಂಬವಾದ್ದರಿಂದ ಸ್ಥಳೀಯರು ಖಾಸಗಿ ವಾಟರ್‌ ಟ್ಯಾಂಕರ್‌ ತರಿಸಿದರು. ಮಳಿಗೆ ಹಿಂಭಾಗದಲ್ಲಿದ್ದ ಗುಜರಿ ವಾಹನಗಳಿಗೆ ನೀರು ಹಾಯಿಸಿ ಬೆಂಕಿ ವಾಪಿಸದಂತೆ ತಡೆದರು. ಘಟನೆಯಿಂದಾಗಿ ಬೈಪಾಸ್‌ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ತುಂಗಾ ನಗರ  ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

f4

ಇದನ್ನೂ ಓದಿ – MRPಗಿಂತಲು ಹೆಚ್ಚು ವಸೂಲಿ, ಫ್ಲಿಪ್‌ಕಾರ್ಟ್‌ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಗ್ರಾಹಕ ನ್ಯಾಯಾಲಯ

Shivamogga Live reached 2.8 million views in January-2026 - Editor : Nitin Kaidotlu

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 7, 2026

Leave a Comment