ಶಿವಮೊಗ್ಗದ ಮನೆಯಲ್ಲಿ ಯಾರೂ ಇರಲಿಲ್ಲ, ಮುಂಬೈನಿಂದ ಬಂದಾಗ ಲಾಕರ್‌ನಲ್ಲಿದ್ದ ಚಿನ್ನಾಭರಣ ಮಾಯ

ಶಿವಮೊಗ್ಗ: ಕುಟುಂಬ ಸಹಿತ ಮುಂಬೈಗೆ ಹೋಗಿದ್ದ ಸಮಯ ಕಳ್ಳರು ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (gold) ಹಾಗೂ ನಗದು ದೋಚಿದ್ದಾರೆ. ನಗರದ ಎಂ.ಕೆ.ಕೆ ರಸ್ತೆಯ ಖಾಜಿ ಮೊಹಲ್ಲಾದಲ್ಲಿ ಘಟನೆ ಸಂಭವಿಸಿದೆ.

ನಜ್ನೀನ್ ಹಬೀಬುಲ್ಲಾ ಅವರು ಅಂಗಡಿಗೆ ಬೇಕಾದ ವಸ್ತುಗಳ ಖರೀದಿಗೆ ತಮ್ಮ ಕುಟುಂಬದೊಂದಿಗೆ ಮುಂಬೈಗೆ ಹೋಗಿದ್ದರು. ಶಿವಮೊಗ್ಗಕ್ಕೆ ವಾಪಸ್ ಬಂದು ನೋಡಿದಾಗ ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮುರಿದಿರುವುದು ಬೆಳಕಿಗೆ ಬಂದಿದೆ.

Crime-News-General-Image

ಕಳ್ಳರು ಮನೆಯ ಬೆಡ್ ರೂಂ ಒಳಗಿದ್ದ ಲಾಕರ್‌ ಅನ್ನು ಆಯುಧದಿಂದ ಮೀಟಿ ಮುರಿದಿದ್ದಾರೆ. ಅದರಲ್ಲಿದ್ದ ಒಟ್ಟು ₹4,75,700 ಮೌಲ್ಯದ ಚಿನ್ನದ ಆಭರಣಗಳು ಮತ್ತು ₹10,000 ನಗದು ಹಣ ಸೇರಿ ಒಟ್ಟು ₹4,85,700 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

25 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೆಸ್, 20 ಗ್ರಾಂ ತೂಕದ ಒಂದು ಬಂಗಾರದ ಕಡಗ, 4.6 ಗ್ರಾಂ ತೂಕದ ಒಂದು ಬಂಗಾರದ ಬ್ರೇಸ್‌ಲೆಟ್, ಬಂಗಾರ ಮತ್ತು ವಜ್ರದ ಉಂಗುರಗಳು ಕಳುವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ಲಾಡ್ಜ್‌ನಲ್ಲಿ ಮಹಿಳಾ ಸಿಬ್ಬಂದಿಯನ್ನು ಎಳೆದಾಡಿದ ಬೆಂಗಳೂರು ವ್ಯಕ್ತಿ, ಇತರೆ ಸಿಬ್ಬಂದಿ ಮೇಲೆ ಹಲ್ಲೆ

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : February 11, 2026 at 2:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಫೆಬ್ರವರಿ 11, 2026

Leave a Comment