ಭದ್ರಾವತಿಯಲ್ಲಿ ಹೊಸ ಸೇತುವೆ ಮರು ನಿರ್ಮಾಣ, ಸ್ಥಳಕ್ಕೆ ಎಂಎಲ್‌ಎ ಭೇಟಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

ಭದ್ರಾವತಿ: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಹೊಸ ಸೇತುವೆ (new bridge) ಮರು ನಿರ್ಮಾಣ ಸ್ಥಳಕ್ಕೆ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಭೇಟಿ ನೀಡಿದ್ದರು. ಈ ಸಂದರ್ಭ ಅಧಿಕಾರಿಗಳು ಸೇತುವೆಯ ರೂಪುರೇಷೆ ಕುರಿತು ವಿವರಿಸಿದರು.

ಈಗಿರುವ ಹೊಸ ಸೇತುವೆ ಎತ್ತರ ಕಡಿಮೆ ಇದೆ. ಇದರಿಂದ ಪ್ರತಿವರ್ಷ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗಿ ಸಮಸ್ಯೆ ಉಂಟಾಗುತ್ತಿದೆ. ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭ ನದಿ ತೀರದ ಮನೆಗಳಿಗೆ ನೀರು ನುಗ್ಗುತ್ತಿದೆ. ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಸವಾಲಿನ ಕೆಲಸವಾಗುತ್ತಿದೆ.

MLA-BK-Sangameshwara-visit-Bhadravathi-New-Bridge-Site.

ಸೇತುವೆ ಮುಳುಗಡೆಯಾದ ಸಂದರ್ಭ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತವಾಗುತ್ತದೆ. ಇದರಿಂದ ವಾಹನ ದಟ್ಟಣೆ ಎದುರಾಗುತ್ತಿದೆ. ಸೇತುವೆ ಮರು ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ₹42 ಕೋಟಿ ಅನುದಾನ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್‌ ರಿಯಾಜ್‌, ಸದಸ್ಯರಾದ ಚನ್ನಪ್ಪ, ಎಂ.ಮಣಿ, ಆರ್. ಶ್ರೇಯಸ್‌, ಎನ್‌. ಮಂಜುನಾಥ್, ರಾಜಕುಮಾರ್ ನಗರಸಭೆ ಪೌರಾಯುಕ್ತ ಕೆ.ಎನ್.ಹೇಮಂತ್, ಎಇಇ ಶ್ರೀನಿವಾಸ್, ಗಿರಿಯಪ್ಪ, ನಗರಸಭೆ ಕಿರಿಯ ಅಭಿಯಂತ ಕೆ. ಪ್ರಸಾದ್‌, ಕೆ.ಜಿ.ಸಂತೋಷ್ ಪಾಟೀಲ್‌ ಇತರರಿದ್ದರು.

ಇದನ್ನೂ ಓದಿ – ಸಾಗರ ಮಾರಿಕಾಂಬ ಜಾತ್ರೆ ಮೆರವಣಿಗೆ ಮುಗಿದ ಮೇಲೆ ವೃದ್ಧನಿಗೆ ಕಾದಿತ್ತು ಶಾಕ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 17, 2026

Leave a Comment