ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಬ್ಯಾಂಕ್ ಖಾತೆಗಳನ್ನು (mule bank account) ವಂಚಕರಿಗೆ ಒದಗಿಸುತ್ತಿದ್ದ ಆರೋಪದ ಹಿನ್ನೆಲೆ ಮತ್ತೆ ಇಬ್ಬರನ್ನು ಶಿವಮೊಗ್ಗದ ಸೈಬರ್ ಕ್ರೈಮ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುದೀಂದ್ರನಾಥ್ ಮತ್ತು ಆರೀಫ್ ಷರೀಫ್ ಎಂದು ಗುರುತಿಸಲಾಗಿದೆ.
ತನಿಖೆಯ ವೇಳೆ ಪತ್ತೆಯಾದ ಒಂದು ಬಾಡಿಗೆ ಬ್ಯಾಂಕ್ ಖಾತೆ ಮೂಲಕ ಬರೋಬ್ಬರಿ ₹2,12,26,896ಗು ಹೆಚ್ಚು ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ಈ ಖಾತೆಯು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಲ್ಲಿ ದಾಖಲಾಗಿರುವ ಒಟ್ಟು ಐದು ಸೈಬರ್ ಪ್ರಕರಣಗಳಲ್ಲಿ ಬಳಕೆಯಾಗಿರುವುದು ಪತ್ತೆಯಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ಸಿ.ಇ.ಎನ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ನಲ್ಲಿ ಪ್ರಕರಣಕ್ಕೆ ಪೂರಕವಾದ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿದ್ದು, ಇಬ್ಬರ ವಿರುದ್ಧ ಐಟಿ ಕಾಯ್ದೆ ಹಾಗೂ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ದೇವಸ್ಥಾನಕ್ಕೆ ಪೂಜೆಗೆ ಬಂದ ಅರ್ಚಕರಿಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ
LATEST NEWS
- ತಡರಾತ್ರಿ 2 ಗಂಟೆಗೆ ಕೇಳಿತು ಸ್ಪೋಟದ ಶಬ್ದ, ಮನೆಯಿಂದ ಹೊರ ಬಂದಾಗ ಕಾಣಿಸ್ತು ಬೆಚ್ಚಿಬೀಳುವ ದೃಶ್ಯ

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಬಾಡಿಗೆ ಬ್ಯಾಂಕ್ ಖಾತೆ ಕೇಸ್, ಶಿವಮೊಗ್ಗದಲ್ಲಿ ಮತ್ತಿಬ್ಬರು ಅರೆಸ್ಟ್, ಏನಿದು ಪ್ರಕರಣ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 19 ಫೆಬ್ರವರಿ 2026 | ಅಡಿಕೆ ಧಾರಣೆ

- KSRTC ಬಸ್ ಹತ್ತಿ ಪರ್ಸ್ನಲ್ಲಿದ್ದ ಆಧಾರ್ ಕಾರ್ಡ್ ತೆಗೆಯಲು ಮಂದಾದ ಮುಹಿಳೆಗೆ ಕಾದಿತ್ತು ಶಾಕ್

About The Editor
ನಿತಿನ್ ಆರ್.ಕೈದೊಟ್ಲು





