ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಚಾಲನೆ, ದರ್ಶನಕ್ಕೆ ಕಿಲೋ ಮೀಟರ್‌ಗಟ್ಟಲೆ ಕ್ಯೂ

Published On : ಫೆಬ್ರವರಿ 24, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ (Kote Marikamba) ದೇವಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಪರದೆ ಸರಿದು ಪ್ರಥಮ ಪೂಜೆ ನೆರವೇರುತ್ತಿದ್ದಂತೆ ಭಕ್ತರು ಘೋಷಣೆಗಳನ್ನು ಕೂಗಿ, ದೇವಿಗೆ ನಮಸ್ಕರಿಸಿದರು. ಬೆಳಗ್ಗೆಯಿಂದ ಗಾಂಧಿ ಬಜಾರ್‌ನಲ್ಲಿ ಮಾರಿಕಾಂಬ ದೇವಿ ದರ್ಶನ ಆರಂಭವಾಗಿದೆ.

ಸರಿದ ಪರದೆ, ಮೊಳಗಿದ ಘೋಷಣೆ

ಗಾಂಧಿ ಬಜಾರ್‌ ತಾಯಿಯ ತವರು ಮನೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಗಾಂಧಿ ಬಜಾರ್‌ನಲ್ಲಿ ಮಂಟಪ ನಿರ್ಮಿಸಿ ಶ್ರೀ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಥಮ ಪೂಜೆಗೂ ಮುನ್ನ ಪರದೆ ಸರಿಸಲಾಯಿತು. ಈ ಸಂದರ್ಭ ಭಕ್ತರು ಘೋಷಣೆಗಳನ್ನು ಮೊಗಳಗಿಸಿದರು.

Kote-Marikamba-Jathre-Darshana-at-Gandhi-Bazaar.

ಪ್ರಥಮ ಪೂಜೆ, ಭಕ್ತರು ಪುನೀತ

ಬಿಬಿ ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬವರು ಕೋಟೆ ಶ್ರೀ ಮಾರಿಕಾಂಬ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ಮಂಗಳಾರತಿ ಬೆಳಗುತ್ತಿರುವುದನ್ನು ಕಂಡು ಭಕ್ತರು ಪುನೀತರಾದರು. ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

kote%20marikamba

ಹರಿದು ಬಂತು ಭಕ್ತ ಸಾಗರ ತಾಯಿಯ ತವರು ಗಾಂಧಿ ಬಜಾರ್‌ನಲ್ಲಿ ದರ್ಶನ ಪಡೆಯಲು ಭಕ್ತ ಸಾಗರ ಹರಿದು ಬಂದಿದೆ. ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತಿರುವ ಜನರು, ದೇವಿಯ ದರ್ಶನ ಪಡೆಯುತ್ತಿದ್ದಾರೆ. ಸೂರ್ಯೋದಯಕ್ಕು ಮೊದಲೇ ಸರತಿ ಸಾಲು ಕೃಷ್ಣ ಕೆಫೆವರೆಗೆ ಇತ್ತು. ಇನ್ನು, ಭಕ್ತರು ಸರಾಗವಾಗಿ ದರ್ಶನ ಪಡೆಯಲು ಗಾಂಧಿ ಬಜಾರ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಗೊಂದಲ ಆಗದಂತೆ ತಡೆಯಲು ಸ್ವಯಂ ಸೇವಕರು, ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.  

Shivamogga Live reached 2.8 million views in January-2026 - Editor : Nitin Kaidotlu

ಇದನ್ನೂ ಓದಿ – ಮಾರಿಕಾಂಬ ಜಾತ್ರೆ, ಗಾಂಧಿ ಬಜಾರ್‌ನಲ್ಲಿ ದೇವಿ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 24, 2026

Leave a Comment