ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ರವೀಂದ್ರನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ (Yamaha bike) ಒಂದನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ. ರವೀಂದ್ರನಗರ 6ನೇ ಕ್ರಾಸ್ ನಿವಾಸಿ ಸಂದೀಪ್ ಕೆ.ಬಿ. ಎಂಬುವವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೀಪ್ ಅವರು ಫೆಬ್ರವರಿ 15ರಂದು ರಾತ್ರಿ 8 ಗಂಟೆಗೆ ಕೆಲಸ ಮುಗಿಸಿ ತಮ್ಮ ಯಮಹಾ ಬೈಕನ್ನು ರವೀಂದ್ರನಗರದ ಮನೆ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದರು. ಮರುದಿನ ಮಧ್ಯಾಹ್ನ 2 ಗಂಟೆಗೆ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ – ಸೂಳೆಬೈಲು, ಊರುಗಡೂರಿನಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ, ಕಾರಣವೇನು?
ಕಳ್ಳತನವಾದ ಬೈಕ್ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣದಿಂದ ಕೂಡಿದ್ದು, ಇದರ ಅಂದಾಜು ಬೆಲೆ ₹30,000 ಎಂದು ತಿಳಿಸಲಾಗಿದೆ. ಬೈಕ್‌ಗಾಗಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆ ತಡವಾಗಿ ದೂರು ನೀಡಿದ್ದಾರೆ.