ತೀರ್ಥಹಳ್ಳಿಯಲ್ಲಿ ಫಾರ್ಚುನರ್‌ ಕಾರಿನಲ್ಲಿ ಬಂದು ಇಂಜಿನಿಯರ್‌ಗೆ ಬೆದರಿಸಿ ಹಣ ವಸೂಲಿ, ಏನಿದು ಕೇಸ್‌?

jnanasoudha Karkala

ತೀರ್ಥಹಳ್ಳಿ: ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕೆರೆಗೆ ನೀರು ತುಂಬಿಸುವ ಕಾಮಗಾರಿ ವೇಳೆ ಇಂಜಿನಿಯರ್‌ಗೆ (engineer) ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ ಘಟನೆ ನಡೆದಿದೆ. ಕಾಮಗಾರಿ ತಡೆಯುವುದಾಗಿ ಬೆದರಿಸಿ ₹20,000 ಫೋನ್ ಪೇ ಮೂಲಕ ವರ್ಗಾಯಿಸಿಕೊಳ್ಳಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಬಸವಾನಿ ಗ್ರಾಮದ ಹೊಳೆಕೊಪ್ಪ ಎಂಬಲ್ಲಿ ಕೆರೆಗೆ ನೀರು ತುಂಬಿಸುವ ಪೈಪ್‌ ಲೈನ್‌ ಕಾಮಗಾರಿ ನಡೆಯುತ್ತಿದೆ. ಮಾರ್ಚ್ 4ರಂದು ಕಾಮಗಾರಿ ಸ್ಥಳಕ್ಕೆ ಫಾರ್ಚುನರ್‌ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಂಜಿನಿಯರ್ ಪ್ರವೀಣ್‌ಕುಮಾರ್ ಅವರ ಬಳಿ ಕಾಮಗಾರಿ ಬಗ್ಗೆ ತಗಾದೆ ತೆಗೆದಿದ್ದಾನೆ. ಅಲ್ಲದೆ ಗೂಗಲ್‌ ಪೇ ಮೂಲಕ ಎರಡು ಬಾರಿ ₹10,000 ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Thirthahalli Police Station

Thirthahalli Police Station

ಈ ಸಂಬಂಧ ಗುತ್ತಿಗೆದಾರ ಮಹೇಶ ಎಂಬುವವರು ದೂರು ನೀಡಿದ್ದಾರೆ. ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment