ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

jnanasoudha Karkala

ಶಿರಾಳಕೊಪ್ಪ: ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ ಪುತ್ರನನ್ನು ಕಳೆದುಕೊಂಡ ದಂಪತಿ ಆತನ ಸಾವು ಹಾಗೂ ಸಾಲದ ಹೊರೆಯ ನಡುವೆಯೂ ಮಾನವೀಯತೆ (Humanity) ಮೆರೆದಿದ್ದಾರೆ. ಪಟ್ಟಣದ ಆನವಟ್ಟಿ ರಸ್ತೆಯ ರೂಪಾ ಮತ್ತು ಕುಮಾರ್ ದಂಪತಿ ಪುತ್ರ ಗಿರೀಶ್‌ನ (16) ಬಹು ಅಂಗಾಂಗ ದಾನದ ಮೂಲಕ ಸಾರ್ಥಕತೆಗೆ ಸಾಕ್ಷಿ ಯಾಗಿದ್ದಾರೆ.

ಇದನ್ನೂ ಓದಿ – ‘ಶಾಸಕರಿಗೆ ಹೇಳಿ ನೀನೆ ತಡೆದಿದ್ದೀಯ’ ಎಂದು ಆರೋಪಿಸಿ ವ್ಯಕ್ತಿ ಮೇಲೆ ಚಪ್ಪಲಿಯಿಂದ ಹಲ್ಲೆ, ಏನಿದು ಪ್ರಕರಣ?

ಇಲ್ಲಿದೆ ಘಟನೆಯ ವಿವರ

ಫೆ. 24ರಂದು ಹಾವೇರಿ ಜಿಲ್ಲೆಯ ಹಿರೆಕೆರೂರು ಸಮೀಪದ ತಾವರಗಿ ಗ್ರಾಮದ ಬಳಿ ಬೈಕ್‌ ಮತ್ತು ಟ್ರ್ಯಾಕ್ಟ‌ರ್ ಅಪಘಾತದಲ್ಲಿ ಗಿರೀಶ್ ತೀವ್ರ ಗಾಯಗೊಂಡಿದ್ದರು. ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಒಂದು ವಾರ ಚಿಕಿತ್ಸೆ ಕೊಡಿಸಲಾಗಿತ್ತು. ಬಂಧುಗಳು, ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚಿಕಿತ್ಸೆಯ ವೆಚ್ಚಕ್ಕಾಗಿ ಸಹಾಯ ಕೋರಿದಾಗ ಹಣ ಸಂಗ್ರಹವಾಗಿತ್ತು. ಅದರಿಂದ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಲಿಲ್ಲ. ಸಹಾಯಹಸ್ತ ಚಾಚಿದರೂ ಅಂದಾಜು 8-10 ಲಕ್ಷ ರೂ. ಖರ್ಚಾಗಿದ್ದರಿಂದ ಸಾಲ ಮಾಡಿ ಆಸ್ಪತ್ರೆ ಶುಲ್ಕ ಪಾವತಿಸಲಾಗಿತ್ತು. ಅಲ್ಲಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಾಲ್ಕು ದಿನಗಳ ನಂತರ ಬಾಲಕ ಕೊನೆಯುಸಿರು ಎಳೆದಿದ್ದಾರೆ.

Girish-succmbed-to-a-mishap-at-anvatti-road-in-Shiralakoppa

ಬಾಲಕನ ಅಂಗಾಂಗ ದಾನ

ಸಾವಿನ ನೋವಿನಲ್ಲೂ ದಂಪತಿ ಮಗ ಗಿರೀಶನ ಕಿಡ್ನಿ, ಹಾರ್ಟ್, ಲಿವರ್, ಲಂಗ್ಸ್ ದಾನ ಮಾಡಿದ್ದಾರೆ. ಶನಿವಾರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ತಂದು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸೊರಬ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

jnanasoudha Karkala

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 8, 2026

Leave a Comment