‌ಶಿವಮೊಗ್ಗದ ಸೂಳೆಬೈಲ್‌ ಮಹಿಳೆ ಅರೆಸ್ಟ್‌, ₹18,00,000 ಮೊತ್ತದ ಆಭರಣ ಸೀಜ್‌, ಏನಿದು ಕೇಸ್‌?

ಶಿವಮೊಗ್ಗ: ಶಾದಿಮಹಲ್‌ಗಳಲ್ಲಿ ನಡೆಯುತ್ತಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತುಂಗಾ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮದುವೆ ಸಮಾರಂಭಗಳಲ್ಲೇ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು (Woman Thief) ಬಂಧಿಸಿ, ಆಕೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ರುಕ್ಸಾರ್ ಫಿರ್ದೋಸ್ (30) ಎಂಬ ಮಹಿಳೆಯನ್ನು ಮಾರ್ಚ್ 7ರಂದು ವಶಕ್ಕೆ ಪಡೆಯಲಾಯಿತು. ಸೂಳೆಬೈಲು ನಿವಾಸಿಯಾದ ಈಕೆ ಮದುವೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Police-Arrest-ruksar-firdos-in-the-theft-case-at-shadhimahal

Police-Arrest-ruksar-firdos-in-the-theft-case-at-shadhimahal

ಬಂಧಿತ ಮಹಿಳೆಯಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 4 ಪ್ರಕರಣಗಳಿಗೆ ಸಂಬಂಧಿಸಿದಂತೆ 120 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಸುಮಾರು ₹18,00,000 ಎಂದು ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ವಿದ್ಯಾನಗರದಲ್ಲಿ ಅದ್ಧೂರಿ ಜಾತ್ರೆ, ಯಾವ್ಯಾವ ದಿನ ಏನೇನು ನಡೆಯಲಿದೆ? ಹೇಗಿದೆ ಸಿದ್ಧತೆ?

ತುಂಗಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ಮತ್ತು ಪಿಎಸ್‌ಐ ಗಾದಿಲಿಂಗಪ್ಪ ಗೌಡರ್ ಅವರ ನೇತೃತ್ವದಲ್ಲಿ ಹೆಚ್.ಸಿ.ಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಶೋಭಾರಾಣಿ, ಸಿಬ್ಬಂದಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಹರೀಶ್, ರಂಗನಾಥ್ ಮತ್ತು ತಮ್ಮಣ್ಣ ಜಂಬಗಿ ಅವರ ತಂಡ ಆರೋಪಿಯನ್ನು ಬಂಧಿಸಿದೆ.

Sunrise Facility Services, Sri sai Trust Shimoga
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment