ಸರ್ಕಾರಿ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಪಡೆದ ದಂಪತಿ, ಆಗಿದ್ದೇನು?

ಶಿವಮೊಗ್ಗ: ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಕೆಲಸ (Government Jobs) ಕೊಡಿಸುವುದಾಗಿ ನಂಬಿಸಿ ವಕೀಲರೊಬ್ಬರು ಸೇರಿದಂತೆ ಹಲವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್‌? – ಅಡಿಕೆ ಧಾರಣೆ

ವಿನೋಬನಗರದ ನಿವಾಸಿ ಹಾಗೂ ವಕೀಲರಾದ ರಾಘವೇಂದ್ರ ಡಿ. ಎಂಬುವವರಿಗೆ ಪರಿಚಯವಾಗಿದ್ದ ಮಂಜುನಾಥ ಎಂಬಾತ, ತನಗೆ ಕೆಪಿಟಿಸಿಎಲ್‌ನಲ್ಲಿ ಉನ್ನತ ಮಟ್ಟದ ಸಂಪರ್ಕವಿದೆ. ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ರಾಘವೇಂದ್ರ ಅವರು ಇದನ್ನು ನಂಬಿ 2022ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಹಂತ ಹಂತವಾಗಿ ಸುಮಾರು ₹18.20 ಲಕ್ಷ ಹಣವನ್ನು ಆರ್‌ಟಿಜಿಎಸ್ ಮತ್ತು ಫೋನ್ ಪೇ ಮೂಲಕ ವರ್ಗಾಯಿಸಿದ್ದರು.

Doddapete-Police-Station-Shimoga

ರಾಘವೇಂದ್ರ ಅವರಿಗಷ್ಟೇ ಅಲ್ಲದೆ, ಅವರ ಪರಿಚಯದ ರಂಗನಾಥ್ ಮತ್ತು ರಾಜು ಎಂಬುವವರಿಗೂ ಕೆಲಸದ ಆಮಿಷ ಒಡ್ಡಿ ಮಂಜುನಾಥ್‌ ಮತ್ತು ಆತನ ಪತ್ನಿ ₹11 ಲಕ್ಷ ನಗದು ಪಡೆದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಣ ಪಡೆದ ನಂತರ ಕೆಲಸ ಕೊಡಿಸದೆ ಇರುವುದರಿಂದ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 12, 2026 at 4:38 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 12, 2026

Leave a Comment