ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

PACE-College-2026

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯ ಆವರಣ ಅಕ್ಷರಶಃ ಸಾಂಸ್ಕೃತಿಕ, ಜಾನಪದ, ಕಲಾ ಲೋಕವಾಗಿ ಮಾರ್ಪಟ್ಟಿದೆ. ವಿಭಿನ್ನ, ವಿಶಿಷ್ಟ, ಅರ್ಥಪೂರ್ಣವಾಗಿ ವಿವಿಧ ವೇಷಗಳನ್ನು ಧರಿಸಿದ್ದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ 40ಕ್ಕೂ ಹೆಚ್ಚು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ, ಮೂರು ದಿನಗಳ ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಸಹ್ಯಾದ್ರಿ ಉತ್ಸವ’ಕ್ಕೆ (Sahyadri Utsava) ಮೆರುಗು ನೀಡಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹಾಗೂ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅವರು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಥ ಸಂಚಲನಕ್ಕೆ ಚಾಲನೆ ನೀಡಿದರು.

130326-Sahyadri-Utsava-in-Kuvempu-University.avif

ವಿವಿಧ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು ಕೇವಲ ಸ್ಪರ್ಧಾಳುಗಳಾಗಿ ಮಾತ್ರವಲ್ಲದೆ ಕಲಾವಿದರಾಗಿಯೂ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಜಾನಪದ ಕಲೆಗಳ ಕಲರವ

ಪಥ ಸಂಚಲನ ಅಪ್ಪಟ ದೇಶಿ ಕಲೆಗಳ ಪ್ರದರ್ಶನದಿಂದ ಕೂಡಿತ್ತು. ಗತ್ತಿನ ನಡಿಗೆಯ ವೀರಗಾಸೆ, ನಂದಿಕೋಲು ಕಲೆಗಳು ಮೆರವಣಿಗೆಗೆ ಕಳೆ ನೀಡಿದವು. ಪೂಜಾ ಕುಣಿತ ಹಾಗೂ ಮಾರಿ ಕುಣಿತ ದೈವಿಕ ಭಾವನೆ ಮೂಡಿಸಿದವು. ಹುಲಿ ಕುಣಿತ, ಹುಲಿ ವೇಷ, ಕೊಡವ ನೃತ್ಯ, ಮಲೆನಾಡಿನ ಅಂಟಿಕೆ ಪಿಂಟಿಕೆ, ಮಾರಿ ಕುಣಿತ, ಬಂಜಾರ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು ಶಿಸ್ತಿನಿಂದ ಪಥ ಸಂಚಲನದಲ್ಲಿ ಸಾಗಿದರು. ಉತ್ಸವದಲ್ಲಿ ತಾಳಬದ್ದವಾಗಿ ಮೊಳಗುತ್ತಿದ್ದ ಕಂಸಾಳೆ ಹಾಗೂ ಡೊಳ್ಳಿನ ಕುಣಿತ ಪ್ರೇಕ್ಷಕರೂ ಕುಣಿಯಲು ಹುಮ್ಮಸ್ಸು ನೀಡುತ್ತಿತ್ತು.

ಇದನ್ನು ಓದಿ – ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಮಾದಕ ವ್ಯವಸನಗಳೆ ಮಹಿಷ

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಮಹಿಷಾಸುರ ಮರ್ದಿನಿ’ ನೃತ್ಯ ರೂಪಕದಲ್ಲಿನ ನವದುರ್ಗೆಯರ ರೌದ್ರಾವತಾರ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಸಮಾಜದಲ್ಲಿ ಮಾದಕ ವ್ಯಸನ, ಅನಿಷ್ಟ ಪದ್ದತಿಗಳನ್ನು ಮಹಿಷನಾಗಿ ಬಿಂಬಿಸಲಾಗಿತು. ಕಟೀಲ್ ಅಶೋಕ್ ಪೈ ಸ್ಮಾರಕ ಪದವಿ ಕಾಲೇಜಿನ ವಿದ್ಯಾರ್ಥಿಗಳು ಖಾದಿ ದಿರಿಸು ಧರಿಸಿ ಆಗಮಿಸುವ ಮೂಲಕ ಸ್ವದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಅರಿವು ಮೂಡಿಸಿದರು.

ನಟಿ ಜಯಮಾಲಾ ಏನಂದ್ರು?

ಬಳಿಕ ಕುವೆಂಪು ವಿವಿಯ ಬಸವ ಸಭಾಭವನದಲ್ಲಿ ಸಹ್ಯಾದ್ರಿ ಉತ್ಸವ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ, ಮಲೆನಾಡು ಕೇವಲ ಪ್ರಕೃತಿಯಲ್ಲ, ದೈತ್ಯ ಪ್ರತಿಭೆಗಳನ್ನು ನಾಡಿಗೆ ನೀಡಿದ ಪವಿತ್ರ ಭೂಮಿ. ಮನುಷ್ಯನನ್ನು ಮೃದುವಾಗಿಸುವ ಸಾಹಿತ್ಯ, ಸಂಗೀತ ಮತ್ತು ಕಲೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ. ಮನುಷ್ಯ ಭಾವನಾಶೂನ್ಯನಾದರೆ ಎಷ್ಟೆ ಆಸೆಗಳಿದ್ದರೂ ಬದುಕು ಶೂನ್ಯ ಎಂದರು.

ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿ ಕುಲಸಚಿವರಾದ ಎ. ಎಲ್. ಮಂಜುನಾಥ್, ಪ್ರೊ. ಆರ್. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ. ಹೆಚ್. ಎನ್. ರಮೇಶ್, ಪ್ರಮುಖರಾದ ಪ್ರೊ. ಜಿ. ಪ್ರಶಾಂತ್ ನಾಯಕ್, ಪ್ರೊ. ವಿಜಯಕುಮಾರ, ಪ್ರೊ. ವೆಂಕಟೇಶ್, ಪ್ರೊ. ಸತ್ಯಪ್ರಕಾಶ್‌ ಇತರರಿದ್ದರು.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 13, 2026 at 2:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 13, 2026

Leave a Comment