ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ, ದೂರಿನಲ್ಲಿ ಭದ್ರಾವತಿಯ 3 ಸ್ನೇಹಿತರ ಉಲ್ಲೇಖ, ಯಾರದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

ಹೊಳೆಹೊನ್ನೂರು: ಇಲ್ಲಿನ ಹನುಮಂತಾಪುರ ಗ್ರಾಮದ ಅಡಿಕೆ ತೋಟದಲ್ಲಿ ಖಾಸಗಿ ಕಾಲೇಜು ಉಪನ್ಯಾಸಕ (lecturer) ಸುರೇಶ್‌.ಹೆಚ್‌.ಆರ್‌ (55) ಅವರ ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆ ಸಂಬಂಧ ಪೊಲೀಸರು ಕೊಲೆಯ ಸಂಶಯದಿಂದ ತನಿಖೆ ನಡೆಸುತ್ತಿದ್ದಾರೆ. ಇನ್ನು, ಪ್ರಕರಣದ ಕುರಿತು ಮೃತ ಸುರೇಶ್‌ ಅವರ ಪತ್ನಿ ನಾಗರತ್ನ ದೂರು ನೀಡಿದ್ದಾರೆ.  

ಶಿವಮೊಗ್ಗದ ವಿನೋಬನಗರದ ಕಲ್ಲಳ್ಳಿಯಲ್ಲಿ ಕುಟುಂಬದೊಂದಿಗೆ ಸುರೇಶ್ ವಾಸವಿದ್ದರು. ಮಾರ್ಚ್ 28ರಂದು ಬೆಳಗ್ಗೆ ಮನೆಯಿಂದ ಹೊರಟಿದ್ದ ಸುರೇಶ್, ‘ಭದ್ರಾವತಿಯ ಮೂವರು ಸ್ನೇಹಿತರ ಜೊತೆಗೆ ತುಮಕೂರಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದೇನೆ, ನಾಳೆ ಸಂಜೆ ಬರುತ್ತೇನೆʼ ಎಂದು ಮನೆಯವರಿಗೆ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

SP-Nikhil-B-Visits-Hanumanthapura-Farm-lecturer-Suresh-incident

ತೋಟದಲ್ಲಿ ಭೀಕರ ದೃಶ್ಯ

ಮಾರ್ಚ್ 29ರ ಬೆಳಗ್ಗೆ ಸುರೇಶ್‌ ಅವರ ಅಣ್ಣನ ಮಗ ಮಧು, ನಾಗರತ್ನ ಅವರಿಗೆ ಕರೆ ಮಾಡಿ ತೋಟದಲ್ಲಿನ ಘಟನೆ ಕುರಿತು ತಿಳಿಸಿದ್ದಾರೆ. ನಾಗರತ್ನ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಸುರೇಶ್ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಶವದ ಪಕ್ಕದಲ್ಲೇ ಅವರ ಬ್ಯಾಗ್, ಮೊಬೈಲ್, ಫೋಟೋ ಇದ್ದ ಪರ್ಸ್ ಹಾಗೂ ಅವರ ಬೈಕ್ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Lecturer-body-at-Hanumanthapura-areca-farm

ಮಾನಸಿಕ ಆಘಾತದಲ್ಲಿದ್ದರು ಉಪನ್ಯಾಸಕ

ಎರಡು ವರ್ಷದ ಹಿಂದೆ ಸುರೇಶ್‌ ಅವರ ಸಹೋದರಿ ಕಮಲಮ್ಮ ಹಾಗೂ ಇತ್ತೀಚೆಗೆ ಆತ್ಮೀಯ ಸ್ನೇಹಿತ ಹಾಲೇಶ್ ಅವರ ನಿಧನದಿಂದ ಸುರೇಶ್ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದರು. ಅವರು ಯಾವಾಗಲೂ ಮಂಕಾಗಿರುತ್ತಿದ್ದರು. ಅಲ್ಲದೆ ಮಾತ ಕೂಡ ಕಡಿಮೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‌

ಇದನ್ನೂ ಓದಿ : ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್‌, ಹೇಗಾಯ್ತು ಘಟನೆ? 

ಕೊಲೆ ಶಂಕೆ, ತನಿಖೆಗೆ ಒತ್ತಾಯ

ತುಮಕೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದ ಸುರೇಶ್‌ ಅವರು ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉದ್ದೇಶಪೂರ್ವಕವಾಗಿಯೆ ಅವರ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಪತ್ನಿ ನಾಗರತ್ನ ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಹೊಳೆಹೊನ್ನೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 31, 2026

ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

ಸೊರಬಕ್ಕೆ ನೂತನ ಜಲವಾಹನ, ಪೊಲೀಸ್‌ ಜೀಪ್‌ಗಳು

‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

ಲಾರಿಯ ಚಕ್ರದಡಿ ಸಿಲುಕಿ ದಂಪತಿ ಸಾವು, ಹೇಗಾಯ್ತು ಘಟನೆ?

ಲಾರಿಯ ಚಕ್ರದಡಿ ಸಿಲುಕಿ ದಂಪತಿ ಸಾವು, ಹೇಗಾಯ್ತು ಘಟನೆ?

ಸ್ಕೀಮ್‌ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್‌

ಸ್ಕೀಮ್‌ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್‌

ಆಯನೂರಿನಲ್ಲಿ ಬೈಕ್‌ ಕಳ್ಳತನ, ಹೇಗಾಯ್ತು ಘಟನೆ?

ಆಯನೂರಿನಲ್ಲಿ ಬೈಕ್‌ ಕಳ್ಳತನ, ಹೇಗಾಯ್ತು ಘಟನೆ?

ಹೊಂಬುಜದಲ್ಲಿ ಮಹಾವೀರ ಜಯಂತಿ, ಶ್ರೀಗಳ ಸಂದೇಶವೇನು?

ಹೊಂಬುಜದಲ್ಲಿ ಮಹಾವೀರ ಜಯಂತಿ, ಶ್ರೀಗಳ ಸಂದೇಶವೇನು?

ಶಿಕಾರಿಪುರ, ಸೊರಬ, ಸಾಗರದ ಕೆರೆಗಳ ಮೀನುಗಾರಿಕೆ ಟೆಂಡರ್‌, ನಿಯಮ ಉಲ್ಲಂಘನೆಗೆ ಆಕ್ರೋಶ

ಶಿಕಾರಿಪುರ, ಸೊರಬ, ಸಾಗರದ ಕೆರೆಗಳ ಮೀನುಗಾರಿಕೆ ಟೆಂಡರ್‌, ನಿಯಮ ಉಲ್ಲಂಘನೆಗೆ ಆಕ್ರೋಶ

ಒಂದೂವರೆ ಕೋಟಿ ಮೌಲ್ಯದ ಅಡಿಕೆ ನಾಪತ್ತೆ, ಆಗಿದ್ದೇನು?

ಒಂದೂವರೆ ಕೋಟಿ ಮೌಲ್ಯದ ಅಡಿಕೆ ನಾಪತ್ತೆ, ಆಗಿದ್ದೇನು?

ಪ್ರಸಿದ್ಧ ರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ, ಮಿನಿಸ್ಟರ್‌ ಏನೆಲ್ಲ ಹೇಳಿದರು?

ಪ್ರಸಿದ್ಧ ರಂಗನಾಥ ಸ್ವಾಮಿಯ ನೂತನ ರಥ ಲೋಕಾರ್ಪಣೆ, ಮಿನಿಸ್ಟರ್‌ ಏನೆಲ್ಲ ಹೇಳಿದರು?

Leave a Comment