ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ರಿಪ್ಪನ್‌ಪೇಟೆ: ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದ ವೇಳೆಯಲ್ಲಿ ವಿದ್ಯುತ್ ಕಂಬ (electric pole) ಏಕಾಏಕಿ ತುಂಡಾಗಿ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜವಳ್ಳಿಯಲ್ಲಿ ನಡೆದಿದೆ.
ಮೈಸೂರು ಮೂಲದ ವಿಜಯ್ (30) ಮೃತಪಟ್ಟ ದುರ್ದೈವಿ. ನಂಜವಳ್ಳಿ ಗ್ರಾಮದಲ್ಲಿ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯಕ್ಕಾಗಿ ಇವರು ಲೈಟ್ ಕಂಬ ಏರಿದ್ದರು. ಈ ಸಂದರ್ಭ ಹಳೆಯ ವಿದ್ಯುತ್ ಕಂಬವು ಏಕಾಏಕಿ ಬುಡಸಮೇತ ತುಂಡಾಗಿ ಬಿದ್ದಿದೆ. ಕಂಬದ ಮೇಲಿದ್ದ ವಿಜಯ್ ಅವರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ರೆಸಾರ್ಟ್‌ನಲ್ಲಿ ವಿದ್ಯುತ್ ಶಾಕ್‌ಗೆ ಮಹಿಳೆ ಬಲಿ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?
ತಕ್ಷಣವೇ ಗಾಯಾಳು ವಿಜಯ್ ಅವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

LATEST NEWS
- ದುರ್ಗಿಗುಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಯಾವಾಗ? ಯಾರಿಗೆಲ್ಲ ಅವಕಾಶವಿದೆ?

- ಅರ್ಧ ಬೆಲೆಗೆ ಚಿನ್ನ, ಶಿವಮೊಗ್ಗದ ಬುಳ್ಳಾಪುರದ ತೆಂಗಿನ ತೋಟದಲ್ಲಿ ಆಗಿದ್ದೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಪ್ರಧಾನಿ ಮೋದಿ ಮೆಚ್ಚಿದ ಗಾಯಕಿ, ಏ.9ರಂದು ಸಂಗೀತ ಕಾರ್ಯಾಕ್ರಮ, ಎಲ್ಲಿ?

- ಬೆಳೆ ವಿಮೆ, ಪರಿಹಾರ ಲಭಿಸದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ, ಯಾವಾಗ ಕೊನೆ ದಿನ?

- ಇನ್ಮುಂದೆ FID ಇದ್ದರಷ್ಟೆ ರೈತರಿಗೆ ಯೂರಿಯಾ ರಸಗೊಬ್ಬರ, ಕಾರಣವೇನು?

About The Editor
ನಿತಿನ್ ಆರ್.ಕೈದೊಟ್ಲು











