ಶಿವಮೊಗ್ಗ ಲೈವ್.ಕಾಂ | SHIMOGA | 10 ಅಕ್ಟೋಬರ್ 2019
ಶಿವಮೊಗ್ಗ ದಸರಾದ ಮೆರಗು ಹೆಚ್ಚಿಸಿದ್ದ ಆನೆಗಳು ಸಕ್ರೆಬೈಲಿನಲ್ಲಿರುವ ಬಿಡಾರಕ್ಕೆ ಹಿಂತಿರುಗಿವೆ. ಇವತ್ತಿನಿಂದ ಮೂರ್ನಾಲ್ಕು ದಿನ ಈ ಆನೆಗಳ ಮೇಲೆ ನಿಗಾ ವಹಿಸಲಾಗುತ್ತದೆ. ಅವುಗಳ ಚಲನವಲನ, ಆಹಾರ ಸೇವಿಸುವುದು ಸೇರಿದಂತೆ ಪ್ರತಿ ಆಗುಹೋಗುವಿನ ಕುರಿತು ಎಚ್ಚರ ವಹಿಸಲಾಗುತ್ತದೆ.
ಅಂಬಾರಿ ಹೊತ್ತ ಸಾಗರ್, ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗಂಗೆ ಮತ್ತು ಭಾನುಮತಿ ಆನೆಗಳನ್ನು ಇನ್ನು ಮೂರ್ನಾಲ್ಕು ದಿನ ಸಕ್ರೆಬೈಲಿನ ಕ್ಯಾಂಪ್‌ನಲ್ಲಿ ಇರಿಸಲಾಗುತ್ತದೆ. ಅವುಗಳ ಆರೋಗ್ಯದ ಸಂಪೂರ್ಣ ತಪಾಸಣೆ ನಡೆಸಲಾಗುತ್ತದೆ.
ಏನೆಲ್ಲ ತಪಾಸಣೆ ಮಾಡಲಾಗುತ್ತದೆ?
ಆನೆಗಳ ಬಾಡಿ ಮೂವ್ಮೆಂಟ್, ಒತ್ತಡ, ಆಹಾರ ಮತ್ತು ನೀರು ಸೇವನೆ, ಭೇದಿ ಸೇರಿದಂತೆ ಆನೆಯ ಪ್ರತಿಯೊಂದು ನಡೆಯ ಮೇಲೆ ವಿಶೇಷ ನಿಗಾ ವಹಿಸಲಾಗುತ್ತದೆ. ಯಾವುದೇ ರೀತಿಯ ಸಣ್ಣ ವ್ಯತ್ಯಾಸ ಕಂಡು ಬಂದರು ಅವುಗಳಿಗೆ ಕೂಡಲೆ ಚಿಕಿತ್ಸೆ ನೀಡಲಾಗುತ್ತದೆ.
ಮೂರ್ನಾಲ್ಕು ದಿನ ಕಾಡಿಗೆ ಬಿಡಲ್ಲ
ಸಕ್ರೆಬೈಲು ಬಿಡಾರದ ಆನೆಗಳನ್ನು ಪ್ರತಿದಿನ ಕಾಡಿಗೆ ಬಿಡಲಾಗುತ್ತದೆ. ಸ್ವಚ್ಛಂದವಾಗಿ ಓಡಾಡಿ ಬರುವ ಆನೆಗಳನ್ನು ಕ್ರಾಲ್ ಪ್ರದೇಶದಲ್ಲಿ ಇರಿಸಲಾಗುತ್ತದೆ. ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿ ಹಿಂತಿರುಗಿರುವ ಸಾಗರ್, ಗಂಗೆ ಮತ್ತು ಭಾನುಮತಿ ಆನೆಗಳನ್ನು ಇನ್ನು ಮೂರ್ನಾಲ್ಕು ದಿನ ಕಾಡಿಗೆ ಬಿಡುವುದಿಲ್ಲ. ಆ ಬಳಿಕ ಹೆಣ್ಣಾನೆಯನ್ನು ಗಂಡಾನೆ ಜೊತೆಗೆ ಮತ್ತು ಗಂಡಾನೆಯನ್ನು ಹೆಣ್ಣಾನೆ ಜೊತೆಗೆ ಸೇರಿಸಿ ಕಾಡಿಗೆ ಕಳುಹಿಸಲಾಗುತ್ತದೆ.
ಜಂಬೂ ಸವಾರಿಯಲ್ಲಿ ಭಾಗವಹಿಸಿದ ಆನೆಗಳ ಆರೋಗ್ಯ ಕಾಪಾಡುವ ಸಲುವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ. ಮೂರ್ನಾಲ್ಕು ದಿನದ ಬಳಿಕವೆ ಈ ಮೂರು ಆನೆಗಳನ್ನು ಬಿಡಾರದ ಸ್ಟಾಂಡ್’ಗೆ ಕರೆತರಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು