ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 10 ಅಕ್ಟೋಬರ್ 2019
ಸಕ್ರೆಬೈಲು ಆನೆ ಬಿಡಾರಕ್ಕೆ ಇನ್ಮುಂದೆ ಹೊಸ ಬ್ರ್ಯಾಂಡ್ ಸಿಕ್ಕಂತಾಗಿದೆ. ಆನೆ ಬಿಡಾರಕ್ಕೆ ಪ್ರತ್ಯೇಕ ಲೋಗೋ ಸಿದ್ಧಪಡಿಸಲಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಸಕ್ರೆಬೈಲು ಆನೆ ಬಿಡಾರದಲ್ಲಿ ಇವತ್ತು ಲೋಗೋ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಸಕ್ರೆಬೈಲು ಆನೆ ಬಿಡಾರದಲ್ಲಿ ಎಲ್ಲವು ಇದೆ. ಅದಕ್ಕೆ ಬ್ರ್ಯಾಂಡ್ ಬೇಕಿತ್ತು. ಈಗ ಲೋಗೋ ಮೂಲಕ ಬ್ರ್ಯಾಂಡ್ ಆಗಿದೆ ಎಂದರು.
ಮಿನಿಸ್ಟರ್ ಕರೆದುಕೊಂಡು ಬರುತ್ತೇನೆ
ಸಕ್ರೆಬೈಲು ಆನೆ ಬಿಡಾರಕ್ಕೆ ಬರುವ ಪ್ರವಾಸಿಗರು ತುಂಬಾ ಹೊತ್ತು ಇಲ್ಲಿ ಸಮಯ ಕಳೆಯುವಂತಾಗಬೇಕು. ಇದಕ್ಕಾಗಿ ಇನ್ನೆರಷ್ಟು ಶೆಲ್ಟರ್ ವ್ಯವಸ್ಥೆ ಆಗಬೇಕಿದೆ. ಹೆಚ್ಚುವರಿ ಶೌಚಾಲಯದ ಬೇಕಿದೆ. ಹೆಚ್ಚುವರಿ ಡಾಕ್ಟರ್ ಅವಶ್ಯಕತೆ ಇದೆ. ಆನೆಗಳ ಆರೋಗ್ಯದ ದೃಷ್ಟಿಯಿಂದ ಮತ್ತಷ್ಟು ವ್ಯವಸ್ಥೆ ಬೇಕಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ, ಅರಣ್ಯ ಸಚಿವರನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತರಲಾಗುತ್ತದೆ ಎಂದರು.
ಅಂಬಾರಿ ಹೊತ್ತ ಆನೆ ಜೊತೆಗೆ ಫೋಟೊ
ಲೋಗೊ ಬಿಡುಗಡೆ ಬಳಿಕ ಸಕ್ರೆಬೈಲು ಆನೆ ಬಿಡಾರ ವೀಕ್ಷಿಸಿದ ಸಂಸದ ರಾಘವೇಂದ್ರ, ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತ ಸಾಗರ್ ಆನೆಯ ಆಶೀರ್ವಾದ ಪಡೆದರು. ಸಾಗರ್ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು






