ಶಿವಮೊಗ್ಗದಲ್ಲಿ ರಾತ್ರಿ ಮಿಂಚು, ಗುಡುಗು, ಮಳೆ, ನಿದಿಗೆಯಲ್ಲಿ ಜೋರಿತ್ತು ವರುಣಾರ್ಭಟ, ತೀರ್ಥಹಳ್ಳಿಯಲ್ಲೂ ಭಾರಿ ಮಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 12 ಅಕ್ಟೋಬರ್ 2019

ಶಿವಮೊಗ್ಗ ನಗರದಲ್ಲಿ ರಾತ್ರಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಜೋರು ಮಳೆಯಿಂದಾಗಿ ಕೆಲವು ಕಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿರುವ ವರದಿಯಾಗಿದೆ.

ನಗರದ ನಿದಿಗೆಯಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಪನ ತಿಳಿಸಿದೆ. ನಿದಿಗೆಯಲ್ಲಿ ರಾತ್ರಿ 65.50 ಮಿ.ಮೀ ಮಳೆ ದಾಖಲಾಗಿದೆ.

ಭಾರಿ ಮಳೆಯಿಂದಾಗಿ ಶಿವಮೊಗ್ಗ ನಗರದ ಕೆಲವು ತಗ್ಗು ಪ್ರದೇಶಕ್ಕೆ ನೀರು ನುಗ್ಗಿರುವ ವರದಿಯಾಗಿದೆ. ಶರಾವತಿ ನಗರದ ಕೆಲವು ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿ ಭಾಗದಲ್ಲು ಜೋರು ಮಳೆ

ತೀರ್ಥಹಳ್ಳಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗಿದೆ. ಇಲ್ಲಿನ ಸಿಂಗನಬಿದರೆಯಲ್ಲಿ 71.50 ಮಿ.ಮೀ, ಕನ್ನಂಗಿಯಲ್ಲಿ 66 ಮಿ.ಮೀ, ದೇಮ್ಲಾಪುರ 65 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment