ಶಿವಮೊಗ್ಗದ ಶಿಕ್ಷಕಿಗೆ ಮೀಶೋ ಶಾಪಿಂಗ್‌ ಹೆಸರಲ್ಲಿ ವಂಚನೆ

ಶಿವಮೊಗ್ಗ: ಆನ್‌ಲೈನ್ ಶಾಪಿಂಗ್ (Online Shopping)ಪ್ಲಾಟ್‌ಫಾರ್ಮ್ ಮೀಶೋ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಓಟಿಪಿ ಪಡೆದು ಶಿಕ್ಷಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ್ದಾನೆ.

ಇದನ್ನೂ ಓದಿ : ಕಂಠಮಟ್ಟ ಕುಡಿದು ಹೊಟ್ಟೆ ತುಂಬಾ ಊಟ ಮಾಡಿ ಬಿಲ್‌ ಕೇಳಿದಾಗ ಬಿಯರ್‌ ಬಾಟಲಿಯಿಂದ ದಾಳಿ

140823-Jayanagara-Police-Station

ಶಿವಮೊಗ್ಗದ ಬಡಾವಣೆಯೊಂದರ ನಿವಾಸಿಯಾಗಿರುವ ಶಿಕ್ಷಕಿ ಕಳೆದ ಸೆಪ್ಟೆಂಬರ್ 21 ರಂದು ಮೀಶೋ ಆಪ್ ಮೂಲಕ ಬಟ್ಟೆಗಳನ್ನು ಆರ್ಡರ್ ಮಾಡಿದ್ದರು. ಅದೇ ದಿನ ಸಂಜೆ ಮನೀಶ್ ಶರ್ಮಾ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಆರ್ಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆ ನೀಡುವಂತೆ ತಿಳಿಸಿದ್ದ. ಆತನ ಮಾತು ನಂಬಿದ ಶಿಕ್ಷಕಿ ಓಟಿಪಿ ಸಂಖ್ಯೆಯನ್ನು ಹಂಚಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

140823-Jayanagara-Police-Station

ಒಟಿಪಿ ಪಡೆದ ಕೆಲವೇ ಕ್ಷಣಗಳಲ್ಲಿ ಶಿಕ್ಷಕಿಯ ಕೆನರಾ ಬ್ಯಾಂಕ್ ಖಾತೆಯಿಂದ ಒಟ್ಟು ₹36,728 ಹಣ ಕಡಿತವಾಗಿದೆ. ಕರೆ ಮಾಡಿ ಒಟಿಪಿ ಪಡೆದ ವ್ಯಕ್ತಿಯೆಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಶಿಕ್ಷಕಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. 

Leave a Comment