ಮದುವೆ ಆಗು ಅಂತಾ ಕಾಲೇಜು ವಿದ್ಯಾರ್ಥಿನಿಯನ್ನು ಎಳೆದಾಡಿದ ಯುವಕ, ದಾಖಲಾಯ್ತು ಪ್ರಕರಣ

Published On : ಏಪ್ರಿಲ್ 23, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಕಾಲೇಜಿಗೆ ಹೋಗುವಾಗ ಹಿಂಬಾಲಿಸಿ, ಚುಡಾಯಿಸಿ (stalking), ಮದುವೆ ಆಗುವಂತೆ ಬಲವಂತಪಡಿಸಿ ಜೀವ ಬೆದರಿಕೆ ಹಾಕುತ್ತಿದ್ದ ಯುವಕನ ವಿರುದ್ಧ ಯುವತಿ ದೂರು ನೀಡಿದ್ದಾರೆ.

ಇದನ್ನೂ ಓದಿ : ಮಹಿಳಾ ಡಾಕ್ಟರ್‌ಗೆ ಅವಾಚ್ಯವಾಗಿ ನಿಂದನೆ, ಅಸಭ್ಯ ವರ್ತನೆ, ವ್ಯಕ್ತಿ ವಿರುದ್ಧ ದೂರು

ನಾಲ್ಕು ತಿಂಗಳಿನಿಂದ ಕಿರುಕುಳ

ಪದವಿ ವಿದ್ಯಾರ್ಥಿನಿಯನ್ನು (ಹೆಸರು, ಊರು ಗೌಪ್ಯ) ಆರೋಪಿಯು ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹಿಂಬಾಲಿಸುತ್ತಿದ್ದ. ಕಾಲೇಜಿಗೆ ಹೋದಾಗ ಅಲ್ಲಿಯೂ ಬಂದು ತೊಂದರೆ ನೀಡುತ್ತಿದ್ದ. ರಾತ್ರಿ ಸಮಯದಲ್ಲಿ ಯುವತಿಯ ಮನೆಯ ಕಿಟಕಿ ಹಾಗೂ ಬಾಗಿಲು ತಟ್ಟಿ ಕಿರುಕುಳ ನೀಡುತ್ತಿದ್ದ. ಮದುವೆಯಾಗುವಂತೆ ಒತ್ತಾಯಿಸಿ, ನಿರಾಕರಿಸಿದರೆ ಕೊಲೆ ಮಾಡುವುದಾಗಿ ಅವಾಚ್ಯ ಪದಗಳಿಂದ ಬೈದು ಜೀವ ಬೆದರಿಕೆ ಹಾಕುತ್ತಿದ್ದನು ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

Shivamogga-Rural-Police-Station

ಎಳೆದಾಡಿ ಹಲ್ಲೆ ನಡೆಸಿದ

ಕೆಲ ದಿನದ ಹಿಂದೆ ಆರೋಪಿಯು, ಯುವತಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಸಂಬಂಧಿಕರು ಆಕೆಯನ್ನು ರಕ್ಷಿಸಿ ಮನೆಗೆ ಕರೆದೊಯ್ದಿದ್ದಾರೆ. ಘಟನೆ ಸಂಬಂಧ ಯುವತಿಯು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ 

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 23, 2026

Leave a Comment