ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕೃತಿ ದಹನ

ಶಿವಮೊಗ್ಗ: ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ (Yuva Morcha) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖರ್ಗೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ವಿರುದ್ಧ ಆಕ್ರೋಶವೇಕೆ?

ತಮಿಳುನಾಡು ರಾಜ್ಯದ ಚುನಾವಣೆ ಪ್ರಚಾರದ ಸಂದರ್ಭ ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು.

BJP-Workers-burn-effigy-of-Mallikarjuna-Kharge-in-Shimoga-Gopi-circle

ಪ್ರತಿಕೃತಿ ದಹನ, ಘೋಷಣೆ

ಗೋಪಿ ವೃತ್ತದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಕೃತಿ ದಹಿಸಲಾಯಿತು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು.

BJP-Workers-burn-effigy-of-Mallikarjuna-Kharge-in-Shimoga-Gopi-circle

‘ಮೋದಿ ಕೃಷ್ಣನ ಅವತಾರʼ

ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ನರೇಂದ್ರ ಮೋದಿ ಅವರು ಕೃಷ್ಣನ ಅವತಾರ. ಭಯೋತ್ಪಾದಕರ ಸಂಹಾರಕ್ಕೆ ಬಂದಿದ್ದಾರೆ ಎಂದರು.

ಭಯೋತ್ಪಾದಕರಿಂದ ಹತರಾದವರು, ಅವರಿಗೆ ಕುಮ್ಮಕ್ಕು ನೀಡಿ ಬೆಳೆಸಿದವರು ಕಾಂಗ್ರೆಸ್‌ ಪಕ್ಷದವರು. ಆದರೆ ನರೇಂದ್ರ ಮೋದಿ ಅವರು ಭಯೋತ್ಪಾದಕರ ಬಗ್ಗು ಬಡಿದರು. ಅವರೆಲ್ಲ ಗಂಟು ಮೂಟೆ ಸಹಿತ ಪಾಕಿಸ್ತಾನಕ್ಕೆ ಹೋಗುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನವರಿಗೆ ಮೋದಿ ಅವರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದು ಟೀಕಿಸಿದರು.

BJP-Workers-burn-effigy-of-Mallikarjuna-Kharge-in-Shimoga-Gopi-circle

ಇದನ್ನೂ ಓದಿ : ಶಿವಮೊಗ್ಗ ಸಿಟಿ: ಕುಡಿಯುವ ನೀರು ಪೂರೈಕೆ ಸಮಸ್ಯೆ, ವಾರ್ಡ್‌ವಾರು ಅಧಿಕಾರಿಗಳ ನಂಬರ್‌ ಪ್ರಕಟ

ಕಾಂಗ್ರೆಸ್‌ ಪಕ್ಷ ಭಯೋತ್ಪಾದಕರನ್ನು ಕ್ಷಮಿಸಬಹುದು. ಆದರೆ ಈ ದೇಶ ಅಂತಹವರನ್ನು ಕ್ಷಮಿಸುವುದಿಲ್ಲ. ಪೆಹಲ್ಗಾಮ್‌ ದಾಳಿಯ ಬಳಿಕ ನರೇಂದ್ರ ಮೋದಿ ಅವರು ಆಪರೇಷನ್‌ ಸಿಂಧೂರದ ಭಯೋತ್ಪಾದಕರ ಅಡಗು ತಾಣಗಳ ಮೇಲೆ ದಾಳಿ ನಡೆಸಿದರು. ನರೇಂದ್ರ ಮೋದಿ ಅವರು ಉಗ್ರರ ಸಂಹಾರಕ್ಕೆ ಬಂದಿರುವ ಕೃಷ್ಣನ ಅಪರಾವತಾರಿ ಎಂದು ಶಾಸಕ ಚನ್ನಬಸಪ್ಪ ಹೇಳಿದರು.

BJP-Workers-burn-effigy-of-Mallikarjuna-Kharge-in-Shimoga-Gopi-circle

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್‌ ಕುಕ್ಕೆ, ಪ್ರಮುಖರಾದ ಜ್ಯೋತಿಪ್ರಕಾಶ್‌, ಮಾಲತೇಶ್‌, ಮೋಹನ್‌ ರೆಡ್ಡಿ, ಜ್ಞಾನೇಶ್ವರ್‌, ಸುರೇಖಾ ಮುರಳೀಧರ್‌, ರಶ್ಮೀ ಶ್ರೀನಿವಾಸ್‌ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ 

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 23, 2026 at 1:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 23, 2026

Leave a Comment