ಶಿವಮೊಗ್ಗ, ಭದ್ರಾವತಿಯಲ್ಲಿ ನಿನ್ನೆಗಿಂತಲು ಹೆಚ್ಚು ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರುತ್ತೆ?

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಝಳ ದಿನೇ ದಿನೆ ಹೆಚ್ಚಳವಾಗುತ್ತಿದೆ. ಉಷ್ಣಾಂಶ ಏರಿಕೆಯಾಗುತ್ತಿದ್ದು ಜನರು ಮನೆ ಒಳಗೂ ಇರಲಾಗದೆ, ಹೊರಗು ಬರಲಾಗದೆ ನಲುಗುವಂತಾಗಿದೆ (Weather). ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ : ಸಿಗಂದೂರು ರಸ್ತೆಯ ಗೋಡೌನ್‌ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?

Shivamogga-Weather-Report

ಜಿಲ್ಲೆಯಾದ್ಯಂತ ತಾಪಮಾನ ಏರಿಕೆಯಾಗಿದೆ. ಭಾರಿ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಬೆಳಗ್ಗೆಯಿಂದಲೇ ಧಗೆ ಆರಂಭವಾಗುತ್ತದೆ. ಬಿಸಿಲೇರುತ್ತಿದ್ದಂತೆ ರಸ್ತೆಗಳು ಕಾದ ಕಾವಲಿಯಂತಾಗುತ್ತಿವೆ. ಸಂಜೆ ಸೂರ್ಯ ಮುಳುಗಿದರು ಸೆಕೆಯ ತೀವ್ರತೆ ಕಡಿಮೆ ಆಗುವುದಿಲ್ಲ. ರಾತ್ರಿಯು ಧಗೆ ಇರಲಿದೆ. ಇನ್ನು, ಇವತ್ತು ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಇದ್ದ ತಾಪಮಾನಕ್ಕಿಂತಲು ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ.

ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ತಾಲೂಕುಗರಿಷ್ಠಕನಿಷ್ಠ
ಶಿವಮೊಗ್ಗ3922
ಭದ್ರಾವತಿ3922
ತೀರ್ಥಹಳ್ಳಿ3521
ಸಾಗರ3323
ಹೊಸನಗರ3523
ಸೊರಬ3723
ಶಿಕಾರಿಪುರ3823
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment