ಸಿಗಂದೂರು ರಸ್ತೆಯ ಗೋಡೌನ್‌ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?

ಸಾಗರ: ಗೋಡೌನ್ ಒಂದರ ಆವರಣದಲ್ಲಿ ನಿಲ್ಲಿಸಿದ್ದ ಲಗೇಜ್ ಆಟೋ (commercial vehicle) ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಕೆಲಸದ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಸಾಗರದ ಸಿಗಂದೂರು ರಸ್ತೆಯ ರಾಜಲಕ್ಷ್ಮಿ ಇಂಡಸ್ಟ್ರೀಸ್ ಗೋಡೌನ್‌ನಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ : ಸಾಗರದಲ್ಲಿ ಸ್ವಚ್ಛತೆ ಇಲ್ಲ, ನೀರಿನ ಸಮಸ್ಯೆ ಗಂಭೀರ, ತೀ.ನಾ.ಶ್ರೀನಿವಾಸ್‌ ಆಕ್ರೋಶ

Sagara-City-Police-Station

Sagara-City-Police-Station

ಗುತ್ತಿಗೆದಾರ ನವೀನ್ ಕುಮಾರ್ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ಹೊಂದಿದ್ದರು. ಪ್ರತಿದಿನ ಗೋಡೌನ್ ಕೌಂಪೌಂಡ್ ಒಳಗೆ ವಾಹನ ನಿಲ್ಲಿಸುತ್ತಿದ್ದರು. ಈಚೆಗೆ ಕೆಲಸಗಾರರಿಗೆ ರಜೆ ಇದ್ದ ಕಾರಣ ವಾಹನ ಗೋಡೌನ್‌ನಲ್ಲಿಯೇ ಇತ್ತು. ರಜೆ ಮುಗಿದ ಮರುದಿನ ಮೇಸ್ತ್ರಿ ಕುಮಾರ್ ಅವರು ಬಂದು ನೋಡಿದಾಗ ವಾಹನ ನಾಪತ್ತೆಯಾಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೆಲಸದ ಸಾಮಾಗ್ರಿಗಳನ್ನು ಕದ್ದಿದ್ದಾರೆ

ಕಳ್ಳರು ಲಗೇಜ್ ಆಟೋ ಮಾತ್ರವಲ್ಲದೆ, ಗೋಡೌನ್ ಬಾಗಿಲು ತೆರೆದು ಒಳಗಿದ್ದ ಕೆಲಸದ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ. 3 ಕಟಿಂಗ್ ಮಿಷನ್, ಹಾರೆಕೋಲು, ಪ್ಲಾಸ್ಟಿಕ್ ಕುರ್ಚಿಗಳು ಕಳ್ಳತನವಾಗಿವೆ. ಒಟ್ಟು 3.20 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನ ಮಾಡಲಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment