ಶಿವಮೊಗ್ಗದಲ್ಲಿ ಯುವಕನ ತಲೆಯಲ್ಲಿ ಸಿಲುಕಿದ ಮಚ್ಚು, ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು, ಏನಿದು ಕೇಸ್‌?

ಶಿವಮೊಗ್ಗ: ಬೈಪಾಸ್‌ ರಸ್ತೆಗೆ (Bypass Road) ಹೊಂದಿಕೊಂಡಿರುವ ಬಡಾವಣೆ ಒಂದರಲ್ಲಿ ಕಳೆದ ರಾತ್ರಿ ಅಪ್ರಾಪ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಪ್ರಾಪ್ತನ ತಲೆಯಲ್ಲಿ ಮಚ್ಚು ಸಿಲುಕಿತ್ತು. ಅದೇ ಸ್ಥಿತಿಯಲ್ಲಿ ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಅಪ್ರಾಪ್ತನ ಮೇಲೆ ದಾಳಿ

ಕಳೆದ ರಾತ್ರಿ 10 ಗಂಟೆ  ಹೊತ್ತಿಗೆ ಯುವಕರ ಗುಂಪೊಂದು ಅಪ್ರಾಪ್ತನ ಮೇಲೆ ದಾಳಿ ನಡೆಸಿದೆ. ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಅಪ್ರಾಪ್ತನ ತಲೆಗೆ ಮಚ್ಚು ಬೀಸಿದ್ದು ಅದು ಆತನ ತಲೆಯಲ್ಲೇ ಸಿಲುಕಿಕೊಂಡಿತ್ತು.

Youth-Attacked-Tunga-Nagara-Police-Station-Limits

ಇದನ್ನೂ ಓದಿ :  ಲಕ್ಕಿನಕೊಪ್ಪದಲ್ಲಿ ಬಾಲಕಿ ಪಾಲಿಗೆ ಉರುಳಾದ ಜೋಕಾಲಿ, ಆಗಿದ್ದೇನು?

ಮಚ್ಚು ಸಹಿತ ಆಸ್ಪತ್ರೆಗೆ

ದಾಳಿಯಿಂದ ತೀವ್ರ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ತಲೆಗೆ ಸಿಲುಕಿದ್ದ ಮಚ್ಚು ಸಹಿತ ಅಪ್ರಾಪ್ತನನ್ನು ಆಟೋದಲ್ಲಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಗಂಭೀರ ಗಾಯಗೊಂಡಿರುವ ಆತನಿಗೆ ಚಿಕಿತ್ಸೆ ಮುಂದುವರೆದಿದೆ.

Youth-Attacked-Tunga-Nagara-Police-Station-Limits

ದಾಳಿ ಮಾಡಿದ್ಯಾರು? ಕಾರಣವೇನು?

ವೈಯಕ್ತಿಕ ವಿಚಾರಕ್ಕೆ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು, ಗಾಯಗೊಂಡಿರುವ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ. ಆತನ ಹೇಳಿಕೆ ಪಡೆದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ. ಮತ್ತೊಂದೆಡೆ ದಾಳಿಕೋರರ ಪತ್ತೆ ಕಾರ್ಯ ನಡೆಯುತ್ತಿದೆ. ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದುಗರ ಗಮನಕ್ಕೆ: ಅಪ್ರಾಪ್ತರ ಪ್ರಕರಣ ಆಗಿರುವುದರಿಂದ ಗಾಯಾಳುವಿನ ಹೆಸರು, ಗುರುತು ಪತ್ತೆಯಾಗುವ ಯಾವುದೇ ವಿಚಾರವನ್ನು ಪ್ರಕಟಿಸಿಲ್ಲ.
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment