ಬಿಸಿಲ ಝಳಕ್ಕೆ ಬ್ರೇಕ್, ಶಿವಮೊಗ್ಗದ ಈ ತಾಲೂಕುಗಳಲ್ಲಿ ಇಂದು ಮಳೆ ಸಾಧ್ಯತೆ

ಹವಾಮಾನ ವರದಿ: ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು ತಾಪಮಾನ ತುಸು ತಗ್ಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿಯು ಬಿಸಿಲ ಝಳ ಕಡಿಮೆಯಾಗಿದೆ. ಇತ್ತ ಇವತ್ತು ಜಿಲ್ಲೆಯ ಹಲವಡೆ ಮಳೆಯಾಗುವ ಸಾಧ್ಯತೆ ಇದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಬಿಸಿಲಿನ ಅಬ್ಬರ ಕಡಿಮೆ ಆಗಿರುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸೆಕೆಯ ಪ್ರಮಾಣ ಇಳಿಕೆಯಾಗಿದೆ. ಆದರೆ ಧಗೆ ಮುಂದುವರಿದಿದೆ. ಇತ್ತ ಶಿವಮೊಗ್ಗದಲ್ಲಿ ಇವತ್ತು ಮೋಡ ಕವಿದ ವಾತಾವರಣ ಮತ್ತು ಮಳೆಯಾಗುವ ಸಂಭವವಿರಲಿದೆ ಎಂದು ಆಕ್ಯೂ ವೆದರ್‌ ಅಂದಾಜಿಸಿದೆ.

Shivamogga-Weather-Report

ಬಿಸಿಲ ಝಳ ತಗ್ಗುತ್ತಾ? ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

  • ಶಿವಮೊಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮಧ್ಯಾಹ್ನದ ಬಳಿಕ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.
  • ತೀರ್ಥಹಳ್ಳಿಯಲ್ಲಿ ಇಂದು ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುವ ಸಾದ್ಯತೆ ಇದೆ. ಮಧ್ಯಾಹ್ನದ ವೇಳೆಗೆ ಮಳೆಯ ನಿರೀಕ್ಷೆ ಇದೆ.
  • ಸಾಗರ ತಾಲೂಕಿನಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುವ ಸಾದ್ಯತೆ ಇದೆ. ಮಧ್ಯಾಹ್ನದ ಹೊತ್ತಿಗೆ ಮಳೆಯ ನಿರೀಕ್ಷೆ ಇದೆ.
  • ಹೊಸನಗರದಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮೋಡ, ಬಿಸಿಲು ಇರಲಿದೆ.
  • ಸೊರಬ ತಾಲೂಕಿನಲ್ಲಿ ಇವತ್ತು ತಾಪಮಾನ ಹೆಚ್ಚಿರಲಿದೆ. ಗರಿಷ್ಠ 36 ಡಿಗ್ರಿ ಸಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮಧ್ಯಾಹ್ನ ಮಳೆಯಾಗಬಹುದು.
  • ಶಿಕಾರಿಪುರದಲ್ಲಿಯು ತಾಪಮಾನ ಹೆಚ್ಚಿರಲಿದೆ. ಇವತ್ತು ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಇಂದು ಮೋಡ ಕವಿದ ವಾತಾರವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಬಹುದು.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಮಳೆಯಿಂದ ಹಾನಿ, ಬಿಜೆಪಿ ನಿಯೋಗದಿಂದ ಮನವಿ, ಏನಿದೆ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment