ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019
ಶಿವಮೊಗ್ಗ ತಾಲೂಕಿನ ಹಿಟ್ಟೂರು ಗ್ರಾಮದ ಬಳಿ ರಾತ್ರಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಇಬ್ಬರನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಂಧಿತರಿಂದ ಚಾಕು, ಖಾರದ ಪುಡಿ ಪ್ಯಾಕೇಟ್, ಒಂದು ಬೈಕಿನ ಬಂಪರ್ ಕೊಳವೆ ಹಾಗೂ ಕಬ್ಬಿಣದ ರಾಡ್ ವಶ ಪಡಿಸಿಕೊಳ್ಳಲಾಗಿದೆ.
ಸೋಮಿನಕೊಪ್ಪದ ಸೈಯದ್ ಮೆಹಬೂಬ್ ( 22) ಮತ್ತು ಅಯನೂರು ಕೋಟೆ ಗ್ರಾಮದ ವೈ.ಕುಮಾರ (30) ಬಂಧಿತರು. ಸೋಮಿನಕೊಪ್ಪದ ಅಮೀರ್ (20), ಸುಲೇಮಾನ್ ಅಲಿಯಾಸ್ ಡಾಕು, ಮುಬಾರಕ್ ಅಲಿಯಾಸ್ ಸೈಯದ್ ಮುಬಾರಕ್ ಅಲಿಯಾಸ್ ಕಾಲು ಎಂಬುವರು ಪರಾರಿಯಾಗಿದ್ದಾರೆ.
ಹಿತ್ತೂರು ರಸ್ತೆಯಲ್ಲಿ ಕೈಯಲ್ಲಿ ಕಾರದಪುಡಿ ರಾಡು ಮತ್ತಿತರ ವಸ್ತುಗಳನ್ನು ಹಿಡಿದು ವಾಹನಗಳನ್ನು ತಡೆದು ದರೋಡೆ ಮಾಡುತ್ತಿರುವ ಬಗ್ಗೆ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ದಾಳಿ ಮಾಡಿದವರು ಪೊಲೀಸರು ಎಂಬುದನ್ನು ಖಚಿತವಾಗುತ್ತಿದ್ದಂತೆ ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]