ಶಿವಮೊಗ್ಗ ತಾಲೂಕಿನ ಹಲವೆಡೆ ಮೇ 1, 2ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗ: ತಾವರೆಚಟ್ನಹಳ್ಳಿ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ವಿವಿಧೆಡೆ ಮೇ 1 ಮತ್ತು 2 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್‌ ಪೂರೈಕೆ ವ್ಯತ್ಯಯವಾಗಲಿದೆ (power cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಅಶ್ವತ್‌ನಗರ, ಕೀರ್ತಿನಗರ, ದೇವಂಗಿ 1 ನೇ ಹಂತ, ಬಸವೇಶ್ವರನಗರ, ಡಾಲರ‍್ಸ್ ಕಾಲೋನಿ, ಪವನಶ್ರೀ ಬಡಾವಣೆ, ಕೃಷಿನಗರ 1 ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಟೇಲ್ ಬಡಾವಣೆ, ಪೆಬಲ್ಸ್ ಅಪಾರ್ಟ್ ಮೆಂಟ್, ಶಾಂತಿನಗರ, ರಾಗಿಗುಡ್ಡ, ಪಾಪ್ಯೂಲರ್ ರೈಸ್‌ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್‌ಮಿಲ್, ಸೇವಾಲಾಲ್ ನಗರ, ವಡ್ಡರಹಟ್ಟಿ, ವಿಜಯಲಕ್ಷ್ಮೀ ರೈಸ್‌ಮಿಲ್, ದೇವಂಗಿ ತೋಟ.

MESCOM-Shimoga-Office

ತಾವರೆಚಟ್ನಹಳ್ಳಿ ಯು.ಜಿ.ಡಿ ಪ್ಲಾಂಟ್, ಗುಂಡಪ್ಪ ಶೆಡ್ ಯು.ಜಿ.ಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಬೊಮ್ಮನಕಟ್ಟೆ ಎ ಯಿಂದ ಹೆಚ್ ಬ್ಲಾಕ್, ಹಳೆ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಜೆ.ಎನ್.ಸಿ.ಸಿ ಇಂಜಿನಿಯರಿಂಗ್ ಕಾಲೇಜ್, ಅಕ್ಷರನಗರ, ಕೃಷಿಕಾಲೇಜ್, ಪರ್ಫೆಕ್ಟ್ ಅಲಾಯ್ಸ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು.

ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ ಕೆಳಗಿನ ತಾಂಡ, ಮೇಲಿನ ತಾಂಡ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಈಶ್ವರ್ ಪ್ಯಾರಡೇಸ್, ಕೊಮ್ಮನಾಳು. ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕೃಷರ್‌ಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಶಿವಮೊಗ್ಗ ಸಿಟಿಯಲ್ಲಿ ಮೇ 1ರಂದು ಕರೆಂಟ್‌ ಇರಲ್ಲ

ಶಿವಮೊಗ್ಗ: ಮೆಸ್ಕಾಂ ನಗರ ಉಪವಿಭಾಗ -2ರ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮೇ.1 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸಹಳ್ಳಿ, ಲಕ್ಷ್ಮೀಪುರ, ಮೈಲಾರಪ್ಪ ಕ್ಯಾಂಪ್, ವೀರಾಪುರ, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಈಚಲವಾಡಿ, ಬಸಾಪುರ ಶಾರದಾ ಕಾಲೋನಿ, ಶರಾವತಿನಗರ, ಐಹೊಳೆ ರಸ್ತೆ, ಶ್ರೀನಿವಾಸ ಲೇಔಟ್ ಹಾಗೂ ಸುತ್ತಮುತ್ತಲಿನ ಐಪಿ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ಕೇಂದ್ರಕ್ಕೆ ಹಸ್ತಾಂತರ ಆಗುತ್ತಾ? ಖಾಸಗಿ ನಿರ್ವಾಹಣೆಗೆ ವಹಿಸಲಾಗುತ್ತಾ?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : April 30, 2026 at 12:18 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಏಪ್ರಿಲ್ 30, 2026

Leave a Comment