ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಸೆಕೆ ವಾತಾವರಣ ಮುಂದುವರೆದಿದೆ. ಒಂದೆಡೆ ಬಿಸಿಲಿನ ಅಬ್ಬರ ಜೋರಿದೆ. ಮತ್ತೊಂದೆಡೆ ಆಗಾಗ ಮೋಡ ಕವಿದ ವಾತಾವರಣವು ಇದೆ. ಇವತ್ತೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಧ್ಯತೆಯು ಇದೆ ಎಂದು ಆಕ್ಯು ವೆದರ್ ವರದಿಯಲ್ಲಿ (Weather Report) ತಿಳಿಸಲಾಗಿದೆ. ➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಹೇಗಿರುತ್ತೆ ವಾತಾವರಣ?
ಶಿವಮೊಗ್ಗ, ಭದ್ರಾವತಿ: ಜಿಲ್ಲಾ ಕೇಂದ್ರದಲ್ಲಿ ಗರಿಷ್ಠ 37°C ಮತ್ತು ಕನಿಷ್ಠ 22°C ತಾಪಮಾನ ಇರುವ ಸಾಧ್ಯತೆ ಇದೆ. ಬಹುತೇಕ ಮೋಡ ಮುಸುಕಿದ ವಾತಾವರಣ ಸಂಭವವಿದೆ.


ತೀರ್ಥಹಳ್ಳಿ: ಗರಿಷ್ಠ 34°C ಮತ್ತು ಕನಿಷ್ಠ 20°C ತಾಪಮಾನ ಇರಲಿದೆ. ಬೆಳಗ್ಗೆ ಬಿಸಿಲು ಮಧ್ಯಾಹ್ನದ ವೇಳೆಗೆ ಮೋಡ ಕವಿಯುವ ಸಾಧ್ಯತೆ.
ಹೊಸನಗರ: ತಾಲೂಕಿನಲ್ಲಿ ಗರಿಷ್ಠ 35°C ಹಾಗೂ ಕನಿಷ್ಠ 21°C ತಾಪಮಾನ ಇರಬಹುದು. ಬಿಸಿಲು ಮತ್ತು ಮೋಡದ ವಾತಾವರಣ.
ಸಾಗರ: ಇವತ್ತು ಗರಿಷ್ಠ 32°C ಹಾಗೂ ಕನಿಷ್ಠ 22°C ತಾಪಮಾನ ಸಾಧ್ಯತೆ. ಭಾಗಶಃ ಬಿಸಿಲಿನ ವಾತಾವರಣ.
ಇದನ್ನೂ ಓದಿ : ಶಿವಮೊಗ್ಗ – ಬೆಂಗಳೂರು ವಿಮಾನ ಸೇವೆ ಸ್ಥಗಿತ, ಯಾಕೆ? ಇಲ್ಲಿದೆ ಪ್ರಮುಖ ಪಾಯಿಂಟ್ಸ್
ಸೊರಬ: ತಾಲೂಕಿನಲ್ಲಿ ಇಂದು ಗರಿಷ್ಠ 36°C ಹಾಗೂ ಕನಿಷ್ಠ 21°C ತಾಪಮಾನ ಇರಲಿದೆ. ಬಿಸಿಲಿನ ವಾತಾವರಣ ಇರಲಿದೆ.
ಶಿಕಾರಿಪುರ: ಇಲ್ಲಿ ಗರಿಷ್ಠ 36°C ಮತ್ತು ಕನಿಷ್ಠ 22°C ತಾಪಮಾನ ಇರಲಿದೆ. ಬಿಸಿಲು ಮತ್ತು ಮೋಡದ ವಾತಾವರಣ.