ಶಿವಮೊಗ್ಗ: ಪೊಲೀಸ್ ಇಲಾಖೆ ಡ್ರೋಣ್ (drones) ಬಳಸಿ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರೆಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಣ್ಣೆ ಪಾರ್ಟಿ ಮಾಡುವವರಿಗೆ ಪೊಲೀಸ್ ಡ್ರೋಣ್ ಬಿಸಿ ಮುಟಿಸಿದೆ.
ಕೋಟೆ ಗಂಗೂರು ಗ್ರಾಮದ ಹೊರ ವಲಯದ ಸಾರ್ವಜನಿಕ ಸ್ಥಳದಲ್ಲಿ ಯುವಕರು ಮದ್ಯ ಸೇವಿಸುತ್ತಿದ್ದರು. ಈ ವೇಳೆ ಪೊಲೀಸ್ ಡ್ರೋಣ್ ಕಾರ್ಯಾಚರಣೆ ನಡೆಸಿದಾಗ ಪಾರ್ಟಿ ನಡೆಯುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಸಂದೀಪ್, ಶಿವನೇಶ ಕುಮಾರ್, ಮೇಘರಾಜ್ ಎಂಬುವವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು ಅಡ್ಡೆ ಮೇಲೆ ದಾಳಿ
ಕಳೆದ ವಾರ ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡ್ರೋಣ್ ಕಾರ್ಯಾಚರಣೆ ನಡೆಸಲಾಗಿತ್ತು. ಜೂಜಾಟದಲ್ಲಿ ತೊಡಗಿದ್ದ 19 ಮಂದಿ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಡ್ರೋಣ್ ಗಸ್ತು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಕ್ರೈಮ್ ಹಾಟ್‌ಸ್ಪಾಟ್ ಮ್ಯಾಪ್ ಮಾಡಿಕೊಂಡಿದ್ದೇವೆ. ಅಲ್ಲಿ ನಡೆಯುವ ಚಟುವಟಿಕೆಗಳನ್ನು ಡ್ರೋಣ್ ಮೂಲಕ ವೀಕ್ಷಿಸಲಾಗುವುದು. ಕೆಲವು ಕಡೆ ಪೊಲೀಸರು ತೆರಳುತ್ತಿದ್ದಂತೆ ಆರೋಪಿಗಳು ಪರಾರಿಯಾಗುತ್ತಾರೆ. ಆದರೆ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳ ಪತ್ತೆ ಸುಲಭವಾಗಲಿದೆ.
– ಬಿ.ನಿಖಿಲ್, ಜಿಲ್ಲಾ ರಕ್ಷಣಾಧಿಕಾರಿ
ಇದನ್ನೂ ಓದಿ : ಡ್ರೋಣ್ ದಾಳಿ: ಭದ್ರಾವತಿಯಲ್ಲಿ 19 ಮಂದಿ ವಿರುದ್ಧ ಕೇಸ್, ಏನಿದು?
shivamogga police news, drones surveillance shivamogga, public drinking case karnataka, bhadravati gambling raid, kote gangur crime, shivamogga rural police, drone patrol shivamogga, shivamoggalive news







