ಶಿವಮೊಗ್ಗಕ್ಕೆ ಇಂಡಿಗೋ ವಿಮಾನ ರದ್ದು; ಮಿನಿಸ್ಟರ್‌ಗೆ ಸಾಗರ MLA ಮನವಿ ಮಾಡಿದ್ದೇನು?

ಶಿವಮೊಗ್ಗ: ಬೆಂಗಳೂರು – ಶಿವಮೊಗ್ಗ ನಡುವಿನ ಇಂಡಿಗೋ ವಿಮಾನ (IndiGo flights) ಸೇವೆಯನ್ನು ಪುನಾರಂಭ ಮಾಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ವಿಧಾನ ಸೌಧದಲ್ಲಿ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಮನವಿಯಲ್ಲಿ ಏನೇನಿದೆ? ಇಲ್ಲಿದೆ ಪಾಯಿಂಟ್ಸ್‌

ಸೇವೆ ಮುಂದುವರೆಸಿ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸದ್ಯ ಬೆಂಗಳೂರು, ಹೈದರಾಬಾದ್ ಮತ್ತು ತಿರುಪತಿಗೆ ವಿಮಾನಯಾನ ಸಂಸ್ಥೆಯು ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯು ಬೆಂಗಳೂರಿಗೆ ಸೇವೆ ಒದಗಿಸುತ್ತಿತ್ತು. ಈ ಸೇವೆಯನ್ನು ಈಗಿನಂತೆಯೇ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

MLA-Beluru-Gopalakrishna-memorandum-to-Minister-MB-Patil-about-Indigo-Airlines

ಜಿಲ್ಲೆಯ ಅಭಿವೃದ್ಧಿಗೆ ಪೂರಕ

ಶಿವಮೊಗ್ಗ ಪ್ರಮುಖ ಪ್ರವಾಸಿ ತಾಣ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ನೂರಾರು ವರ್ತಕರು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ಈ ವಿಮಾನ ಸೇವೆಯ ಲಾಭ ಪಡೆಯುತ್ತಿದ್ದರು. ಇದು ಜಿಲ್ಲೆಯ ವ್ಯಾಪಾರ ವಹಿವಾಟು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.

MLA-Beluru-Gopalakrishna-memorandum-to-Minister-MB-Patil-about-Indigo-Airlines

ಸರ್ಕಾರದ ಸವಲತ್ತುಗಳಿಗೆ ಮನವಿ

ಇಂಡಿಗೋ ಸಂಸ್ಥೆಯು ವಿಮಾನ ಸೇವೆಯನ್ನು ರದ್ದುಪಡಿಸಿದೆ. ಆದ್ದರಿಂದ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು. ಸರ್ಕಾರದ ವತಿಯಿಂದ ಇಂಡಿಗೋ ಸಂಸ್ಥೆಗೆ ಅಗತ್ಯ ಸವಲತ್ತು ಒದಗಿಸಿ. ಸೇವೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ – ಬೆಂಗಳೂರು ವಿಮಾನ ಸೇವೆ ಸ್ಥಗಿತ, ಯಾಕೆ? ಇಲ್ಲಿದೆ ಪ್ರಮುಖ ಪಾಯಿಂಟ್ಸ್‌

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಹೆಂಡತಿಗೆ ಕಿರುಕುಳ, ಗಂಡನಿಗೆ ಜೈಲು ಶಿಕ್ಷೆ, ದಂಡ