ಕುವೆಂಪು ವಿವಿ: ಮೂವರಿಗೆ ಗೌರವ ಡಾಕ್ಟರ್‌, ರಾಜ್ಯಪಾಲರ ಅನುಮೋದನೆ, ಹೆಸರು ಘೋಷಣೆ

ಶಂಕರಘಟ್ಟ: ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ. ವಿ. ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)‌ ನ ಮಾಜಿ ನಿರ್ದೇಶಕ ಪ್ರೊ. ಹೆಚ್.‌ ಎ. ರಂಗನಾಥ್‌ ಅವರಿಗೆ ಕುವೆಂಪು ವಿ‍ಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ (Honorary Doctorate) ಘೋಷಣೆಯಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

ಮೇ 6ರಂದು ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 35ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತದೆ ಎಂದು ಕುವೆಂಪು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Kuvempu-University-Board

Kuvempu-University-Board

ಗೌರವ ಡಾಕ್ಟರೇಟ್‌ ನೀಡಲು ರಾಜ್ಯಪಾಲರಿಂದ ಅಧಿಕೃತ ಅನುಮೋದನೆ ದೊರೆತಿದೆ. ರಾಜ್ಯದ ಮೂವರು ಸಾಧಕರಿಗೆ ಕುವೆಂಪು ವಿವಿ ಗೌರವ ಸಲ್ಲಿಸಲಿದೆ ಎಂದು ತಿಳಿಸಲಾಗಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ ಕೋಣಂದೂರು ಲಿಂಗಪ್ಪ, ರಂಗಭೂಮಿಯ ಸೇವೆಗೆ ಕೆ. ವಿ. ಅಕ್ಷರ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಗೆ ಪ್ರೊ. ಎಚ್. ಎ. ರಂಗನಾಥ್‌ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ : ಕುವೆಂಪು ವಿವಿಯ 79 ವಿದ್ಯಾರ್ಥಿಗಳಿಗೆ 155 ಚಿನ್ನದ ಪದಕ, ಯಾರೆಲ್ಲ ಎಷ್ಟು ಸ್ವಣ ಪದಕ ಪಡೆದಿದ್ದಾರೆ?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion