ಹೆದ್ದಾರಿಯ ಮಧ್ಯದಲ್ಲಿದ್ದ ಯಮರೂಪಿ ಗುಂಡಿ ಮುಚ್ಚಿದ ಜನ, ಆಡಳಿತದ ವಿರುದ್ಧ ಆಕ್ರೋಶ

ಶಿವಮೊಗ್ಗ: ಹೆದ್ದಾರಿಯಲ್ಲಿದ್ದ ಬೃಹತ್ ಗುಂಡಿಗಳನ್ನು (potholes) ಮುಚ್ಚಲು ಆಡಳಿತ ವ್ಯವಸ್ಥೆ ವಿಫಲವಾದ ಹಿನ್ನೆಲೆ ಸ್ಥಳೀಯರೇ ಸ್ವಯಂಪ್ರೇರಿತರಾಗಿ ಗುಂಡಿ ಮುಚ್ಚಿದ್ದಾರೆ. ಗಾಡಿಕೊಪ್ಪ ಸರ್ಕಲ್‌ನಲ್ಲಿ ಹೆದ್ದಾರಿಯಲ್ಲಿ ಬೃಹತ್‌ ಗುಂಡಿಯಾಗಿತ್ತು. ಇದರಿಂದ ಅಪಘಾತಗಳು ಸಂಭವಿಸಿದ್ದವು.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಗುಂಡಿಯಿಂದಾಗಿ ನಿರಂತರ ಅಪಘಾತ

ಗಾಡಿಕೊಪ್ಪದಲ್ಲಿ ಹಾದು ಹೋಗಿರುವ ಬಿ.ಹೆಚ್‌.ರಸ್ತೆಯಲ್ಲಿ ಸರ್ಕಲ್‌ ಬಳಿ ರಸ್ತೆ ಹದಗೆಟ್ಟಿದೆ. ಬೃಹತ್ ಗುಂಡಿಯಿಂದಾಗಿ ಪ್ರತಿನಿತ್ಯ ವಾಹನ ಸವಾರರಿಗೆ ಸಂಕಷ್ಟ ಎದುರಾಗುತ್ತಿತ್ತು. ಈ ಗುಂಡಿಯಿಂದಾಗಿ ಹಲವು ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿದ್ದರು. ಈ ಹಿನ್ನೆಲೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

frustrated residents of Gadi Koppa fill massive potholes

050526 Gadikoppa Residents close a pot hole on BH Road in Shimoga

ಜೆಲ್ಲಿ, ಮಣ್ಣು, ಸಿಮೆಂಟ್‌ ತಂದ ಜನ

ಸಮೀಪದಲ್ಲಿ ನಿರ್ಮಾಣ ಹಂತದ ಮನೆಯಿಂದ ಸಿಮೆಂಟ್‌, ಜೆಲ್ಲಿ, ಮರಳು ತಂದು ಸ್ಥಳೀಯರೆ ಗುಂಡಿ ಮುಚ್ಚಿದ್ದಾರೆ. ಅಲ್ಲದೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಹೆದ್ದಾರಿಯಲ್ಲಿ ಇರುವ ಗುಂಡಿಗಳನ್ನು ಕೂಡಲೆ ಮುಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಭದ್ರಾವತಿಯ ಆರು ಮಂದಿಗೆ 3 ವರ್ಷ ಜೈಲು, ₹2,30,000 ದಂಡ, ಏನಿದು ಕೇಸ್‌?