ಸೋಮಿನಕೊಪ್ಪದಲ್ಲಿ ಬೀದಿ ನಾಯಿಗಳ ಹಾವಳಿ; ಮಗು ಸೇರಿ ಇಬ್ಬರ ಮೇಲೆ ದಾಳಿ

ಶಿವಮೊಗ್ಗ: ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ (Stray dog menace) ಮಿತಿಮೀರಿದೆ. ನಾಲ್ಕು ವರ್ಷದ ಬಾಲಕಿ ಹಾಗೂ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಬುಧವಾರ ಸಂಜೆ ಮನೆ ಮುಂಭಾಗ ಆಟವಾಡುತ್ತಿದ್ದ ಇರ್ಜಾ ಕೌನೇನ್ ಎಂಬ 4 ವರ್ಷದ ಬಾಲಕಿಯ ಮೇಲೆ ನಾಯಿ ದಾಳಿ (Dog attack) ಮಾಡಿದೆ. ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಕೂಡಲೇ ಧಾವಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಇನ್ನು ಗುರುವಾರ ಬೆಳಿಗ್ಗೆ ಇದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೃಷ್ಣಾ ನಾಯ್ಕ್ ಎಂಬುವವರ ಮೇಲೆಯೂ ನಾಯಿ ದಾಳಿ ನಡೆಸಿದೆ.

Stray-Dog-attack-in-Sominakoppa-in-Shimoga

Stray-Dog-attack-in-Sominakoppa-in-Shimoga

ಒಂದು ಕರುವಿನ ಮೇಲೆಯೂ ನಾಯಿ ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ. ಸಾಲು ಸಾಲು ಘಟನೆಗಳ ಬೆನ್ನಿಗೆ ಬಡಾವಣೆಯ ಜನರು ಮನೆಯಿಂದ ಹೊರಬರಲು ಭೀತಿ (Public fear) ಪಡುತ್ತಿದ್ದಾರೆ. “ಬೀದಿ ನಾಯಿಗಳ ಹಾವಳಿ ಕುರಿತು ಪಾಲಿಕೆಗೆ (City Corporation) ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ (Public demand).

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion