ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019
ಇದ್ದ ಮನೆಯನ್ನು ಸರ್ಕಾರ ಉರುಳಿಸಿತು. ಟಾರ್ಪಲ್ ಟೆಂಟ್’ಗಳು ಮಳೆ, ಗಾಳಿಗೆ ಹಾರಿಹೋಯ್ತು. ನೆಲೆಯಿಲ್ಲದೆ ನಲುಗುತ್ತಿರುವವರ ಕುಟುಂಬಗಳು ಈಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಸರೆಗಾಗಿ ಆಗ್ರಹಿಸಿ ಧರಣಿ ಆರಂಭಿಸಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ತಾಲೂಕಿನ ವಿರೂಪಿನಕೊಪ್ಪದ ಹಸಿರುಗಿಡ ಗ್ರಾಮದ 13 ಕುಟುಂಬಗಳು ಈಗ ಬೀದಿಗೆ ಬಿದ್ದವೆ. ಹಾಗಾಗಿ ನೆರವು ಕೋರಿ ಜಿಲ್ಲಾಧಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದ್ದಾರೆ.
ದಿನಸಿ, ಪಾತ್ರೆಗಳು, ವಸ್ತುಗಳ ಸಹಿತ ಧರಣಿ
ಮನೆ ಇಲ್ಲದೆ ಇರುವುದರಿಂದ 13 ಕುಟುಂದವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಮಾಡಲು ನಿರ್ಧರಿಸಿದ್ದಾರೆ. ಇದೆ ಕಾರಣಕ್ಕೆ ಅಡುಗೆಗೆ ಅವಶ್ಯವಿರುವ ಪಾತ್ರೆ, ದಿನಸಿ ಮತ್ತು ದಿನಬಳಕೆ ಬಟ್ಟೆಗಳನ್ನು ಧರಣಿ ಸ್ಥಳಕ್ಕೆ ತಂದಿಟ್ಟುಕೊಂಡಿದ್ದಾರೆ.
13 ಕುಟುಂಬದವರು ಮನೆ ಕಳೆದುಕೊಂಡಿದ್ದೇಕೆ?
ವಿರೂಪಿನ ಕೊಪ್ಪದ ಹಸಿರುಗಿಡದಲ್ಲಿ ಕೆಲವು ಮನೆಗಳು ಮಹಾನಗರ ಪಾಲಿಕೆ ಜಾಗದಲ್ಲಿ ನಿರ್ಮಿಸಲಾಗಿತ್ತು. ಇತ್ತೀಚೆಗಷ್ಟೆ ಆ ಮನೆಗಳನ್ನು ತೆರವು ಮಾಡಲಾಗಿತ್ತು. ಆ ಬಳಿಕ ನಿವಾಸಿಗಳು ಟಾರ್ಪಲ್ ಟೆಂಟ್ ನಿರ್ಮಿಸಿಕೊಂಡಿದ್ದಾಗಿ ತಿಳಿಸುತ್ತಿದ್ದಾರೆ. ಆದರೆ ನಿನ್ನೆ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಟೆಂಟ್’ಗಳು ಹಾರಿ ಹೋಗಿವೆ. ಇದರಿಂದ ಈ ಕುಟುಂಬಗಳು ಬೀದಿಗೆ ಬಂದಿವೆ. ವಾಸಿಸಲು ಎಲ್ಲಿಯು ಸ್ಥಳವಿಲ್ಲದ್ದರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದು ವಾಸಿಸುತ್ತಿದ್ದೇವೆ ಅನ್ನುತ್ತಾರೆ ಪ್ರತಿಭಟನಾನಿರತ ಬೀಬಿ ಆಯಿಷಾ.
ಪ್ರತಿಭಟನಾನಿರತರಿಗೆ ನ್ಯಾಯ ದೊರಕಿಸಿಕೊಡಬೇಕು. ಅಲ್ಲಿಯವರೆಗು ಅವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಧರಣಿ ನಿಲ್ಲಿಸುವುದಿಲ್ಲ ಎಂದು ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಅಧ್ಯಕ್ಷ ರಿಯಾಜ್ ಅಹಮದ್ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]