ಬಸ್ಸಿನಿಂದ ಇಳಿದ ಮಹಿಳೆಯ ಪಾದದ ಮೇಲೆ ಹರಿಯಿತು ಅದೇ ಬಸ್ಸಿನ ಚಕ್ರ

ಸಾಗರ: ತಾಲೂಕಿನ ಸಿರಿವಂತೆ ಗ್ರಾಮದ ಬೋರ್ಡ್‌ಗಲ್ ಬಳಿ ಬಸ್ಸಿನಿಂದ ಇಳಿದ ವೃದ್ಧೆಯೊಬ್ಬರ ಮೇಲೆ ಬಸ್ ಚಕ್ರ ಹರಿದು, ಗಂಭೀರವಾಗಿ ಗಾಯಗೊಂಡಿರುವ (Seriously injured) ಘಟನೆ ನಡೆದಿದೆ.

ಸಿರಿವಂತೆಯಲ್ಲಿ ಸಮಾರಂಭಕ್ಕೆ ತೆರಳುತ್ತಿದ್ದರು

ದಾವಣಗೆರೆಯ ಎಸ್‌.ಪಿ.ಎಸ್ ನಗರದ ನಿವಾಸಿ ಯಶೋದಮ್ಮ (64) ಗಾಯಗೊಂಡವರು. ಏಪ್ರಿಲ್ 21 ರಂದು ಸಿರಿವಂತೆಯಲ್ಲಿ ನಡೆಯುತ್ತಿದ್ದ ಗೃಹಪ್ರವೇಶ (Housewarming) ಮತ್ತು ಮದುವೆ (Wedding) ಸಮಾರಂಭಕ್ಕೆ ಹೋಗಲು ಸಾಗರದಿಂದ ಖಾಸಗಿ ಬಸ್‌ (Private bus) ಹತ್ತಿದ್ದರು.

ACCIDENT-NEWS-GENERAL-IMAGE.

ಪಾದದ ಮೇಲೆ ಹರಿದ ಚಕ್ರ

ಸಂಜೆ 5:45ರ ಹೊತ್ತಿಗೆ ಸಿರಿವಂತೆ ಬೋರ್ಡ್‌ಗಲ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುತ್ತಿದ್ದಾಗ, ಚಾಲಕನು ಮಹಿಳೆ ಇಳಿದಿರುವುದನ್ನು ಗಮನಿಸದೆ ಏಕಾಏಕಿ ಬಸ್ಸನ್ನು ಚಲಾಯಿಸಿದ್ದಾನೆ. ಇದರಿಂದ ಬಸ್ಸಿನ ಸೈಡ್ ಬಾಡಿ ತಗುಲಿ ಯಶೋದಮ್ಮ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ಸಿನ ಹಿಂದಿನ ಚಕ್ರ ಅವರ ಬಲಗಾಲಿನ ಪಾದದ ಮೇಲೆ ಹರಿದಿದೆ ಎಂದು ಆರೋಪಿಸಲಾಗಿದೆ.

ಸಾಗರದಿಂದ ದಾವಣಗೆರೆ ಆಸ್ಪತ್ರೆಗೆ

ಅಪಘಾತದಿಂದಾಗಿ (Accident) ಯಶೋದಮ್ಮ ಅವರ ಪಾದ ನುಜ್ಜುಗುಜ್ಜಾಗಿದೆ. ತಕ್ಷಣ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಂತರ ದಾವಣಗೆರೆಯ ಎಸ್.ಎಸ್.ಐ.ಎಂ.ಎಸ್ (SSIMS) ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಖಾಸಗಿ ಬಸ್‌ ಚಾಲಕನ (Bus driver) ವಿರುದ್ಧ ಸಾಗರ ಗ್ರಾಮಾಂತರ ಠಾಣೆಯಲ್ಲಿ (Sagara Rural Police Station) ಪ್ರಕರಣ ದಾಖಲಾಗಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 11, 2026 at 10:20 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 11, 2026