ಶಿವಮೊಗ್ಗದಲ್ಲಿ ಜಿಮ್‌ ಬಳಿ ಜಿಮ್‌ ಟ್ರೇನರ್‌ ಮೇಲೆ ಕಬ್ಬಿಣದ ರಾಡ್‌ನಿಂದ ದಾಳಿ

ಶಿವಮೊಗ್ಗ: ಜಿಮ್ ಟ್ರೈನರ್ (Gym Trainer) ಒಬ್ಬರ ಮೇಲೆ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಹಲ್ಲೆ (Assault) ಮಾಡಿರುವ ಘಟನೆ ನಡೆದಿದೆ. ನಗರದ ವಿನೋಬನಗರದ 100 ಅಡಿ ರಸ್ತೆಯಲ್ಲಿರುವ (100 Feet Road) ಜಿಮ್‌ ಬಳಿ ಘಟನೆ ನಡೆದಿದೆ.

ದಿಢೀರ್‌ ಬಂದು ಅಡ್ಡಗಟ್ಟಿದ

ವಿನಾಯಕನಗರದ ನಿವಾಸಿ ತೇಜು ಎಂ. (28) ಹಲ್ಲೆಗೊಳಗಾದವರು. ರಾತ್ರಿ ವಿನೋಬನಗರದ ಸ್ಮಾರ್ಟ್ ಫಿಟ್ (Smart Fit) ಜಿಮ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಮರಳಲು ತಮ್ಮ ಬೈಕ್ ಹತ್ತುತ್ತಿದ್ದಾಗ ವ್ಯಕ್ತಿಯೊಬ್ಬ ದಾಳಿ ಮಾಡಿದ್ದಾನೆ. 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ (Unknown Person) ಏಕಾಏಕಿ ತೇಜು ಅವರನ್ನು ಅಡ್ಡಗಟ್ಟಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ (Death Threat) ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

vinobanagara police station

ಕಬ್ಬಿಣದ ರಾಡ್‌ನಿಂದ ದಾಳಿ

ನಂತರ ವ್ಯಕ್ತಿಯು ಕಬ್ಬಿಣದ ರಾಡ್‌ನಿಂದ (Iron Rod) ತೇಜು ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯ ನಂತರ ಆರೋಪಿಯು ಕಬ್ಬಿಣದ ರಾಡ್ ಅನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾನೆ (Absconded). ಗಾಯಗೊಂಡಿದ್ದ ತೇಜು ಅವರನ್ನು ಅವರ ಸ್ನೇಹಿತರಾದ ಭಾನುಪ್ರಸಾದ್ ಹಾಗೂ ಅಭಿ ಅವರು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ (McGann Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion