ಕಾಣಿಕೆ ಹಣ ಕದ್ದು ಹುಂಡಿಯನ್ನು ಕೆರೆ ಬದಿ ಎಸೆದು ಹೋದ ಕಳ್ಳರು, ಎಲ್ಲಿ? ಆಗಿದ್ದೇನು?

ಆನವಟ್ಟಿ: ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಾಣಿಕೆ ಹುಂಡಿಯನ್ನು (Temple Hundi) ಕಳವು ಮಾಡಿದ್ದಾರೆ. ಸೊರಬ ತಾಲೂಕಿನ ಕೋಡಿಕೊಪ್ಪ ಗ್ರಾಮದ ದೇಗುಲದಲ್ಲಿ ಘಟನೆ ನಡೆದಿದೆ.

ಗ್ರಾಮದ ಕೆಂಚಮ್ಮ, ದುರ್ಗಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಪೂಜೆಗಾಗಿ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನ (Theft) ನಡೆದಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ದ್ವಾರದ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಅಲ್ಲಿದ್ದ ಕಾಣಿಕೆ ಹುಂಡಿಯನ್ನು ಹೊತ್ತೊಯ್ದಿದ್ದರು. ಹುಂಡಿಯಲ್ಲಿ ಭಕ್ತರು ಹಾಕಿದ್ದ ಸುಮಾರು ₹1,45,000 ಹಣವಿತ್ತು ಎಂದು ಅಂದಾಜಿಸಲಾಗಿದೆ.

Shivamogga-Police-Jeep

ಕೋಡಿಕೊಪ್ಪ ಗ್ರಾಮದ ಕೆರೆಯ ಅಂಗಳದಲ್ಲಿ ಕಾಣಿಕೆ ಹುಂಡಿ ಪತ್ತೆಯಾಗಿದೆ. ಕಳ್ಳರು ಕಲ್ಲಿನಿಂದ ಜಜ್ಜಿ ಹುಂಡಿಯನ್ನು (Hundi Box) ಒಡೆದು ಅದರಲ್ಲಿದ್ದ ಹಣ ತೆಗೆದುಕೊಂಡು ಹೋಗಿದ್ದಾರೆ. ಆನವಟ್ಟಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 12, 2026 at 6:00 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 12, 2026