ಶಿವಮೊಗ್ಗ: ಸಿಬಿಆರ್ ಕಾನೂನು ಕಾಲೇಜಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ನ್ಯಾಷನಲ್ ಎಜುಕೇಶನ್ ಸೊಸೈಟಿಯ (NES) ಸಿಬಿಆರ್ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರವು (CBR College of Law) ವಿವಿಧ ಬೋಧಕ ಹುದ್ದೆಗಳ (Faculty Recruitment) ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಹುದ್ದೆಗಳ ವಿವರ

  • ಅಸೋಸಿಯೇಟ್ ಪ್ರೊಫೆಸರ್ (ಕಾನೂನು): 2 ಹುದ್ದೆಗಳು
  • ಅಸಿಸ್ಟೆಂಟ್ ಪ್ರೊಫೆಸರ್ (ಕಾನೂನು): 3 ಹುದ್ದೆಗಳು
  • ಅಸಿಸ್ಟೆಂಟ್ ಪ್ರೊಫೆಸರ್ (ರಾಜ್ಯಶಾಸ್ತ್ರ – ಕಾನೂನೇತರ): 1 ಹುದ್ದೆ

ಅರ್ಹತೆ ಏನು? ವೇತನ ಎಷ್ಟು?

ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದ ಸ್ನಾತಕೋತ್ತರ ಪದವಿಯಲ್ಲಿ (PG) ಕನಿಷ್ಠ ಶೇ 55 ರಷ್ಟು ಅಂಕಗಳನ್ನು ಹೊಂದಿರಬೇಕು. ನೆಟ್ ಅಥವಾ ಸ್ಲೆಟ್ (NET/SLET) ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು. ಅಸೋಸಿಯೇಟ್ ಪ್ರೊಫೆಸರ್ಹುದ್ದೆಗೆಪಿಹೆಚ್.ಡಿ (Ph.D.) ಪದವಿ ಪಡೆದಿರಬೇಕು. ಆಯ್ಕೆಯಾದವರಿಗೆ ಯುಜಿಸಿ (UGC) ನಿಯಮಾವಳಿಗಳ ಪ್ರಕಾರ ವೇತನ ಶ್ರೇಣಿ ಇರಲಿದೆ.

Shivamogga-Job-Update

ಆಸಕ್ತರು ತಮ್ಮ ರೆಸ್ಯೂಮ್ (Resume) ಹಾಗೂ ಅಗತ್ಯ ಪ್ರಮಾಣಪತ್ರಗಳ ಪ್ರತಿಗಳನ್ನು 2026ರ ಜೂನ್ 11 ರ ಒಳಗಾಗಿ ರಿಜಿಸ್ಟರ್ಡ್ ಪೋಸ್ಟ್ (Registered Post) ಮೂಲಕ ತಲುಪುವಂತೆ ಕಳುಹಿಸಬೇಕು ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರಾಂಶುಪಾಲರು, ಸಿಬಿಆರ್ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ, ಬಾಲರಾಜ್ ಅರಸ್ ರಸ್ತೆ, ಶಿವಮೊಗ್ಗ – 577201. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08182-272228 ಸಂಪರ್ಕಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್. ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.