NEWS HIGHLIGHTS
ಶಿವಮೊಗ್ಗ: ಕರ್ತವ್ಯ ನಿರತ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) 8ನೇ ಪಡೆಯ ಕಾನ್ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಈರಣ್ಣ ಗುಡಾದಾರ್ (26) ಮೃತ ದುರ್ದೈವಿ. 7 ವರ್ಷಗಳಿಂದ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಕೆಎಸ್ಆರ್ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 18 ದಿನಗಳ ಹಿಂದೆಯಷ್ಟೇ ಇವರ ವಿವಾಹ ನೆರವೇರಿತ್ತು.

ಬುಧವಾರ ಕರ್ತವ್ಯದಲ್ಲಿದ್ದ ಅವರಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಸಹೋದ್ಯೋಗಿಗಳು ಹಾಗೂ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಈರಣ್ಣ ಗುಡಾದಾರ್ ಕೊನೆಯುಸಿರೆಳೆದಿದ್ದಾರೆ.