ಶಿವಮೊಗ್ಗದಲ್ಲಿ ಕಾರ್‌ ಡೀಲರ್‌, ಸಹೋದರನ ಮೇಲೆ ದುಷ್ಕರ್ಮಿಗಳ ದಾಳಿ, ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಸಹೋದರರ ಮೇಲೆ ದಾಳಿ ನಡೆಸಿದೆ. ಗಾಯಾಳುಗಳು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಿವಮೊಗ್ಗದ ಟಿಪ್ಪುನಗರದ 5ನೇ ತಿರುವಿನಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ. ಕಾರ್ ಡೀಲರ್ ರಹಮತ್ ಉಲ್ಲಾ ಮತ್ತು ಅವರ ಸಹೋದರ ನ್ಯಾಮತ್‌ ಉಲ್ಲಾ ಅವರ ಮೇಲೆ ಹಲ್ಲೆಯಾಗಿದೆ. ರಹಮತ್‌ ಉಲ್ಲಾ ಅವರ ಬಲ ಭುಜದ ಬಳಿ ಭರ್ಚಿಯಿಂದ ಇರಿಯಲಾಗಿದೆ. ನ್ಯಾಮತ್‌ ಉಲ್ಲಾ ಅವರ ಎಡಗೈಗೆ ಗಾಯವಾಗಿದೆ. ದಾಳಿ ನಡೆಸಿದವರು ಅದೇ ಬಡಾವಣೆಯ ನಿವಾಸಿಗಳು ಎಂದು ಆರೋಪಿಸಲಾಗಿದೆ.

Attack-on-Rahamath-Ulla-at-Tippu-Nagara-in-Shimoga

ಹೇಗಾಯ್ತು ಘಟನೆ?

ಘಟನೆ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಾರ್‌ ಡೀಲರ್‌ ರಹಮತ್‌ ಉಲ್ಲಾ, ‘ತಮ್ಮ ಮನೆ ಬಳಿ ಕೆಲವರು ಗಲಾಟೆ ಮಾಡುತ್ತಿರುವ ಬಗ್ಗೆ ಮಗಳು ಫೋನ್ ಮಾಡಿ ತಿಳಿಸಿದ್ದಳು. ತಕ್ಷಣ ಸಹೋದರನ ಜೊತೆಗೆ ಅಲ್ಲಿಗೆ ಧಾವಿಸಿದೆ. ತಮ್ಮ ಮನೆ ಬಳಿ ಯಾಕೆ ಗಲಾಟೆ ಮಾಡುತ್ತಿದ್ದೀರ ಎಂದು ಪ್ರಶ್ನಿಸುತ್ತಿದ್ದಂತೆ ಸುಮಾರ 8 ರಿಂದ 9 ಯುವಕರ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿದರು. ಯುವಕರ ಗುಂಪಿನಲ್ಲಿದ್ದವರು ಟಿಪ್ಪು ನಗರದವರೆʼ ಎಂದು ಆರೋಪಿಸಿದರು.

Shivamogga Live Promotion

ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.